ಸಕ್ಕರೆ ಭರಿತ ಪಾನೀಯಾ ಆರೋಗ್ಯಕ್ಕೆ ಅಪಾಯಕರ

ಮಂಗಳವಾರ, 16 ಆಗಸ್ಟ್ 2016 (12:03 IST)
ಪಾನೀಯಾ ಕುಡಿಯುವವರಿಗೆ ಕಹಿ ಸುದ್ದಿ ಇಲ್ಲಿದೆ. ನೀವೂ ಹೆಚ್ಚಾಗಿ ಕೂಲ್ ಡ್ರಿಂಕ್ಸ್, ಶೂಗರ್ ಡ್ರಿಂಕ್ಸ್, ಅಧಿಕ ಶೂಗರ್ ಕ್ಯಾಲೋರಿ ಇರುವ ಪಾನೀಯಾ ಸೇವಿಸುತ್ತಿದ್ದೀರಾ ಹಾಗಾದ್ರೆ ನಿಲ್ಲಿಸಿ ಬಿಡಿ ಎನ್ನುತ್ತಿದೆ ಸಂಶೋಧನೆ. 
ಯೆಸ್, ನೀರಿನಿಂದ ತಯಾರು ಮಾಡಿದ ಕೂಲ್ ಡ್ರಿಂಕ್ಸ್, ಸೋಡಾ ಮೊದಲಾದವುಗಳಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶ ಇರುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೇ, ಸ್ಥೂಲಕಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಆದ್ರೆ ಸ್ವಲ್ಪ ಪ್ರಮಾಣದ ಸಕ್ಕರೆ ಹೊಂದಿರುವ ಸೋಡಾ, ಡ್ರಿಕ್ಸ್ ಮೊದಲಾದವುಗಳು ದೇಹದ ಆರೋಗ್ಯ ದೃಷ್ಟಿಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುತ್ತಿದೆ ಸಂಶೋಧನೆ.
 
ಶುಗರ್ಸ್ ನಲ್ಲಿ ಹೆಚ್ಚಾಗಿ ಸ್ವೀಟ್ ಅಂಶ ವಿರುತ್ತದೆ. ಇದು ಪಾನೀಯಾಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಆದ್ದರಿಂದ ಹೊರಗಡೆ ತಯಾರಿಸಲಾದ ಕೂಲ್ ಡ್ರಿಂಕ್ಸ್ ಹಾಗೂ ಸೋಡಾ ಪಾನೀಯಾಗಳಲ್ಲಿ ಹಾಗೂ ಸಿಹಿ ಕಾಫಿಯಲ್ಲಿ ಬೊಜ್ಜನ್ನು ಹೆಚ್ಚಿಸಬಹುದು. ಅಲ್ಲದೇ ಮಧುಮೇಹ ಬಾಗೂ ಹೃದಯದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಸಂಶೋಧನೆ ತಿಳಿಸಿದೆ.

ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗಲು ಹೆಚ್ಚು ನೀರು ಕುಡಿಯುವುದು ಉತ್ತಮವಾದದ್ದು ಎಂದು ಅಧ್ಯಯನದಿಂದ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ