ಮಳೆಗಾಲದಲ್ಲಿ ಚರ್ಮ ರಕ್ಷಣೆ: ಚರ್ಮದ ಮೇಲೆ ಕಲೆ,ತುರಿಕೆಗೆ ಮನೆ ಮದ್ದು

ಮಂಗಳವಾರ, 19 ಜುಲೈ 2016 (10:52 IST)
ಮಳೆಗಾಲದಲ್ಲಿ ಸಾಮಾನ್ಯವಾಗಿ  ಚರ್ಮದ ಅನಾರೋಗ್ಯ ಕಾಡುತ್ತದೆ. ಚರ್ಮದ ಮೇಲೆ ಕೆಂಪಾದ ಕಲೆ, ಚರ್ಮದ ತುರಿಕೆ ಆಗಾಗ್ಗ ಭಾದಿಸಬಹುದು. ಸಾಂಕ್ರಾಮಿಕವಲ್ಲದ ದೀರ್ಘಕಾಲಿನ ಚರ್ಮರೋಗ ಮಹಿಳೆ ಹಾಗೂ ಪುರುಷ ಎಂಬ ಭೇದಭಾವವಿಲ್ಲದೇ ಎಲ್ಲರಲ್ಲಿ ಚರ್ಮ ರೋಗ ಕಾಣಿಸಿಕೊಳ್ಳುತ್ತದೆ. 

ಚರ್ಮವನ್ನು ಬ್ಯಾಕ್ಟೇರಿಯಾ ಹಾಗೂ ಶಿಲೀಂದ್ರಗಳಿಂದ ರಕ್ಷಣೆ ಮಾಡಬೇಕಾಗುತ್ತದೆ. ಇಲ್ಲವಾದರೆ ಚರ್ಮದ ಅನೇಕ ರೀತಿಯ ಸಮಸ್ಯೆಗಳು ನಿಮಗೆ ಕಾಡಬಹುದು. ಮನೆಯಲ್ಲೇ ಚರ್ಮದ ರಕ್ಷಣೆ ಕುರಿತು ಮನೆ ಮದ್ದು ಟಿಪ್ಸ್ ಇಲ್ಲಿದೆ. 

ಚರ್ಮದ ಮೇಲೆ ಗುಳ್ಳೆಗಳು: (ಚರ್ಮದ ತುರಿಕೆ) 
ಉಷ್ಣದಿಂದ ಚರ್ಮದ ಮೇಲೆ ಉಂಟಾಗುವ ಕೆಂಪುಬಣ್ಣದ ಗುಳ್ಳೆಗಳು ನಿಮಗೆ ಕಾಡಬಹುದು.  ಹೆಚ್ಚಿನ ವೇಳೆಯಲ್ಲಿ 
ಗುಳ್ಳೆಗಳು ತುರಿಕೆ ಉಂಟು ಮಾಡಬಹುದು.ಇಂಥ ಸಂದರ್ಭದಲ್ಲಿ ಮನೆಯಲ್ಲೇ ಸೀಗುವ ವಸ್ತುಗಳನ್ನು ಉಪಯೋಗಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು.
ಮಳೆಗಾಲದಲ್ಲಿ ಚರ್ಮದ ರಕ್ಷಣೆ ಮಾಡಬೇಕಾದರೆ ಸಡಿಲವಾಗಿರುವಂತಹ ಆಗಿರುವಂತಹ ಕಾಟನ್ ಬಟ್ಟೆಗಳನ್ನು ಉಪಯೋಗಿಸುವುದು ಉತ್ತಮ.
 
ತೇವ ಹಾಗೂ ಶಾಖವನ್ನು ತಪ್ಪಿಸಿ, ತುಂತುರು ಮಳೆಯಲ್ಲಿ ನಿಮ್ಮ ಚರ್ಮವನ್ನು ಒದ್ದೆಯಾಗದಂತೆ ಡ್ರೈ ಮಾಡಿಕೊಳ್ಳಿ
ಇನ್ನೂ ಚರ್ಮದ ತುರಿಕೆ ಕಂಡು ಬಂದರೆ ಕ್ಯಾಲಮೈನ್ ಎಣ್ಣೆ ಉಪಯೋಗಿಸಿ.
 
 

ಸೋರಿಯಾಸಿಸ್: 
ಸೋರಿಯಾಸಿಸ್ ಬಹುಜನರನ್ನು ಕಾಡುವ ಸಮಸ್ಯೆಗಳಲ್ಲಿ ಒಂದು. ಸೋರಿಯಾಸಿಸ್ ನಿಮ್ಮ ಚರ್ಮದ ಮೇಲೆ ಕೆಂಪು ಕಲೆಗಳು 
ಕಾಣಿಸಿಕೊಂಡಿದ್ರೆ ಮನೆಯಲ್ಲಿ ಸೀಗುವ ಅಲೋವೆರಾ ಜೆಲ್ ಉಪಯೋಗಿಸಿ. ನಿಮ್ಮ ಚರ್ಮದ ಯಾವ ಭಾಗದಲ್ಲಿ ಕೆಂಪು ಕಲೆಗಳು 
ಕಾಣಿಸಿಕೊಂಡಿದ್ರೆ ಈ ಜೆಲ್ ಬಳಕೆ ಮಾಡಿದ್ದರೆ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗುಳ್ಳೆಗಳನ್ನು ಹಾಗೂ ಚರ್ಮದ ಇತರ ಸಮಸ್ಯೆಗಳನ್ನು ತಡೆಗಟ್ಟಬಹುದು. 
ಮಳೆಗಾಲದಲ್ಲಿ ಚರ್ಮವನ್ನು ಹಲವು ಬ್ಯಾಕ್ಟೇರಿಯಾಗಳನ್ನು ತಡೆಯುವಲ್ಲಿ ಲೋಳೆರಸ ಸಹಾಯ ಮಾಡಬಲ್ಲದ್ದು. ಚರ್ಮದ ಕಾಯಿಲೆಗಳನ್ನು 
 
ತಡೆಯುವಲ್ಲಿ ಮನೆ ಮದ್ದಿನಂತೆ ಇದು ಚಿಕಿತ್ಸೆ ನೀಡಬಲ್ಲದ್ದು. ದ್ರಾಕ್ಷಿಯನ್ನು ಗುಲಾಬಿ ತೈಲದ ಜತೆಗೆ ಮಿಶ್ರಣ ಮಾಡಿ ಹಚ್ಚುವುದರಿಂದ ಸೋರಿಯಾಸಿಸ್ ಚರ್ಮರೋಗದ ಸಮಸ್ಯೆಯನ್ನು ತಡೆಗಟ್ಟಬಹುದು. 
 
ಅಲ್ಲದೇ ಆಲಿವ್ ಎಣ್ಣೆಯು ರಾಮಬಾಣದಂತೆ ಕೆಲಸ ಮಾಡಬಲ್ಲದ್ದು. ಚರ್ಮದಲ್ಲಿ ತುರಿಕೆ ಹಾಗೂ ದದ್ದುಗಳು ಆಗಿದ್ದರೆ ಆಲಿವ್ ಎಣ್ಣೆಯನ್ನು ದದ್ದು ಇರುವ ಭಾಗಗಳಲ್ಲಿ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮದ ಸಮಸ್ಯೆಯನ್ನು ನಿವಾರಿಸಬಹುದು. 
 
ನಿಮ್ಮ ಮುಖವನ್ನು ಫೇಸ್ ವಾಶ್‌ನಿಂದ ತೊಳೆದುಕೊಳ್ಳುವುದು ಉತ್ತಮ. 

ಪಾದಕ್ಕೆ ಧರಿಸುವ ಶೂಗಳು: 
ಕ್ರೀಡಾಪಟುಗಳು ಹೆಚ್ಚಾಗಿ ಶೂಗಳ ಬಳಕೆ ಮಾಡುತ್ತಾರೆ. ಪ್ರತಿ ಬಾರಿಯೂ ಶೂ ಗಳನ್ನು ಧರಿಸುವುದರಿಂದ ನಿಮ್ಮ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವುದರ ಜತೆಗೆ ಶಿಲೀಂದ್ರ ಸೋಂಕು ಕಾಣಿಸಿಕೊಳ್ಳುತ್ತದೆ. ಅಧಿಕ ಭಾರವಿರುವ ಹಾಗೂ ಒದ್ದೆಯಾಗಿರುವಂತಹ ಶೂಗಳನ್ನು ಧರಿಸಬಾರದು. 
ಪ್ಲಾಸ್ಟಿಕ್ ಶೂ ಹಾಗೂ ಚಪ್ಪಲಿಗಳನ್ನು ಉಪಯೋಗಿಸುವುದನ್ನು ತಪ್ಪಿಸಿ. ಸ್ಲಿಪರ್‌ಗಳನ್ನು ಉಪಯೋಗಿಸಿ
 
ಕಾಟನ್ ಸಾಕ್ಸ್‌ಗಳನ್ನು ನಿತ್ಯವು ತೊಳೆದು ಬಳಕೆ ಮಾಡುವುದು ಉತ್ತಮ. ಹಾಗೂ ಕೊಬ್ಬರಿ ಎಣ್ಣೆಯನ್ನು ನಿಯಮಿತವಾಗಿ ಉಪಯೋಗಿಸಿ, ಚರ್ಮದ ಕಾಂತಿ ಹಾಗೂ ಒಣ ಚರ್ಮವನ್ನು ಕಾಪಾಡಿಕೊಳ್ಳುವುದು ಮಳೆಗಾಲದಲ್ಲಿ ಕಾಪಾಡಿಕೊಳ್ಳುವುದು ಅಗತ್ಯ ಎಂಬುದು ತಿಳಿದಿರಲಿ. 
 

ನಿತ್ಯವು ಫ್ರೆಶ್ ಹಣ್ಣುಗಳನ್ನು ಹಾಗೂ ತರಕಾರಿಗಳನ್ನು ಸೇವಿಸುವುದರಿಂದ ನಿಮಗೆ ಎನರ್ಜಿ ಸೀಗುತ್ತದೆ. ಅಲ್ಲದೇ ನಿತ್ಯ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ದೇಹದ ಜೀವಾಣುಗಳನ್ನು ನೀರು ಸ್ವಚ್ಛಗೊಳಿಸಬಲ್ಲದ್ದು. 
ಅಲ್ಲದೇ ಮಳೆಗಾಲದಲ್ಲಿ ತರಕಾರಿಗಳಿಂದ ಮಾಡಿದ ಸೂಪ್‌ನ್ನು ಸೇವಿಸುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ