ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಮುರುಡೇಶ್ವರ

ಸೋಮವಾರ, 11 ಡಿಸೆಂಬರ್ 2017 (11:17 IST)
ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ ದೇವಾಲಯವು ಧಾರ್ಮಿಕ ಪುಣ್ಯ ಸ್ಥಳವಾಗಿದ್ದು ಐತಿಹಾಸಿಕ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬೀಸಮುದ್ರದ  ತೀರದಲ್ಲಿದ್ದು, ಪ್ರಪಂಚದ ಅತ್ಯಂತ ಎತ್ತರವಾದ  ಶಿವನ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. ಇದು ಕೇವಲ ಧಾರ್ಮಿಕ  ಕ್ಷೇತ್ರ ಮಾತ್ರವಲ್ಲ ಪ್ರವಾಸಿ ತಾಣವು ಆಗಿದೆ.


ಮುರುಡೇಶ್ವರದಲ್ಲಿ ದೊಡ್ಡ ಶಿವನ ವಿಗ್ರಹವಿದ್ದು, ಇದು ಏಷ್ಯಾದಲ್ಲಿಯೆ 2ನೇ ಅತಿ ಎತ್ತರವಾದ ಶಿವನ ಪ್ರತಿಮೆಯಾಗಿದೆ ಹಾಗೂ ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜ ಗೋಪುರವಿದೆ. ಇದು ಧಾರ್ಮಿಕರನಷ್ಟೇ ತನ್ನತ್ತ ಸೆಳೆಯದೆ, ಪ್ರವಾಸಿಗರನ್ನು ಕೂಡ ಆಕರ್ಷಿಸುತ್ತಿದೆ. ಪ್ರವಾಸಿಗರಿಗೆ ಇರಲು ಹೋಟೆಲ್, ರೆಸ್ಟೊರೆಂಟ್ ಗಳ ವ್ಯವಸ್ಥೆಯು ಅಲ್ಲಿ ಇದೆ.


ರಾವಣನಿಂದ ಗೋಕರ್ಣದ ಆತ್ಮಲಿಂಗ  ಸ್ಥಾಪನೆಯಾದಾಗ ಇನ್ನು ನಾಲ್ಕು ಲಿಂಗಗಳು ಸ್ಥಾಪಿಸಲ್ಪಟ್ಟವು ಎಂಬುದು ಪುರಾಣದ ಕಥೆ. ಅವುಗಳೆಂದರೆ ಗುಣವಂತೇಶ್ವರ, ಧಾರೇಶ್ವರ, ಸಜ್ಜೇಶ್ವೇರ ಗಳಲ್ಲಿ ಮುರುಡೇಶ್ವರವು ಒಂದು. ಹಾಗೆ ಇಂದಿಗೂ ಅಲ್ಲಿಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಾಂಕರ ಮೂರ್ತಿಗಳು, ಹಲವು ದೇವಾಲಯಗಳು, ಕೆರೆ, ವೀರರ ಮನೆ, ವೀರಗಲ್ಲುಗಳು, ಮರದಿಂದ ತಯಾರಿಸಿದ 16 ಮಾಸತಿಯರ ಕುರುಹುಗಳು ಇವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ