ಮಗು ದತ್ತು ತೆಗೆದುಕೊಳ್ಳುವ ಮೊದಲು ನೀವು ಗಮನಿಸಬೇಕಾದ ಅಂಶಗಳಿವು

ಭಾನುವಾರ, 19 ಮೇ 2019 (07:20 IST)
ಬೆಂಗಳೂರು: ಮಕ್ಕಳಿಲ್ಲದ ದಂಪತಿಗೆ ಆಶಾಕಿರಣ ದತ್ತು ಪ್ರಕ್ರಿಯೆ. ಅನಾಥ ಮಗುವೊಂದಕ್ಕೆ ಪೋಷಕರಾಗುವ ಅನನ್ಯ ಕೆಲಸಕ್ಕೆ ಮೊದಲು ಕೆಲವು ವಿಚಾರಗಳನ್ನು ನಾವು ತಿಳಿದುಕೊಳ್ಳಲೇಬೇಕು.


ದತ್ತು ಮಗುವೆಂದು ಯಾವತ್ತೂ ಹೇಳಿಕೊಳ್ಳಬೇಡಿ
ಮಗುವಿಲ್ಲದ ಮನೆಗೆ ದೇವರಂತೆ ನಗುವಾಗಿ ಬರುವ ಮಗುವನ್ನು ಯಾವತ್ತೂ ಅನ್ಯ ಮಗುವೆಂದ ಭಾವಿಸಬೇಡಿ. ಅದನ್ನು ನಿಮ್ಮ ಸ್ವಂತ ಮಗುವಂತೇ ನೋಡಿಕೊಳ್ಳುವ ವಿಶಾಲ ಮನೋಭಾವ ಬೆಳೆಸಿಕೊಳ್ಳಿ. ಪೋಷಕರು ಮಾತ್ರವಲ್ಲ, ಮನೆಯವರೂ ಆ ಮಗುವನ್ನು ಅನ್ಯರಂತೆ ಭಾವಿಸಬಾರದು ಎಂದು ಮೊದಲೇ ಎಲ್ಲರಿಗೂ ತಿಳಿಹೇಳಿ.

ಕಾನೂನು ಪ್ರಕ್ರಿಯೆ
ಕಾನೂನು ಪ್ರಕಾರ ದತ್ತು ತೆಗೆದುಕೊಳ್ಳುವಾಗಲೂ ಮಗುವಿನ ಬಗ್ಗೆ ಪೂರ್ವಾಪರ ತಿಳಿದುಕೊಂಡೇ ಮಗುವನ್ನು ಸ್ವೀಕರಿಸಿ. ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ಎಲ್ಲಾ ಕಾನೂನು ಪ್ರಕ್ರಿಯೆ, ಪೂರ್ವಾಪರಗಳನ್ನು ಪೂರ್ತಿಗೊಳಿಸುವುದು ಮುಖ್ಯ.

ಮಿಥ್ಯ ಆಲೋಚನೆ ಬೇಡ
ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಬಗ್ಗೆ ತಜ್ಞರೊಂದಿಗೆ ಸರಿಯಾಗಿ ವಿಚಾರಿಸಿ. ಸರಿಯಾದ ಕಾನೂನು ಮಾಹಿತಿಯಿಲ್ಲದೇ ತಪ್ಪು ಕಲ್ಪನೆ ಇಟ್ಟುಕೊಂಡು ದತ್ತು ಸ್ವೀಕಾರಕ್ಕೆ ಮುಂದಾಗಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ