ಬೇಸಿಗೆಕಾಲದಲ್ಲಿ ಎ‍ಣ್ಣೆ ಚರ್ಮದವರು ಈ ಆಹಾರದಿಂದ ದೂರವಿರಿ

ಭಾನುವಾರ, 28 ಮಾರ್ಚ್ 2021 (06:16 IST)
ಬೆಂಗಳೂರು : ಬೇಸಿಗೆಯಲ್ಲಿ ‍ಎಣ್ಣೆಯುಕ್ತ ಚರ್ಮದವರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅವರ  ಚರ್ಮ ಎಣ್ಣೆಯಂಶವನ್ನು ಹೆಚ್ಚು ಉತ್ಪತ್ತಿ ಮಾಡುವುದರಿಂದ ಮೊಡವೆಗಳು ಮೂಡುತ್ತವೆ. ಹಾಗಾಗಿ ಬೇಸಿಗೆಕಾಲದಲ್ಲಿ ಎ‍ಣ್ಣೆ ಚರ್ಮದವರು ಈ ಆಹಾರದಿಂದ ದೂರವಿರಿ.

*ಡೈರಿ ಉತ್ಪನ್ನಗಳಾದ ಹಾಲು, ಬೆಣ್ಣೆ, ತುಪ್ಪ, ಚೀಸ್ ಮುಂತಾದ ವಸ್ತುಗಳನ್ನು ಸೇವಿಸಬೇಡಿ.ಇದು ಚರ್ಮವನ್ನು ಮತ್ತಷ್ಟು ಎ‍ಣ್ಣೆಯುಕ್ತಗೊಳಿಸುತ್ತದೆ.

*ಸಿಹಿ ತಿಂಡಿಗಳಾದ ಚಾಕೋಲೇಡ್, ಸ್ವೀಟ್ಸ್, ಸಕ್ಕರೆ, ಐಸ್ ಕ್ರೀಂ, ಬಿಸ್ಕತ್ತು ಮುಂತಾದವುಗಳನ್ನು ಸೇವಿಸಬೇಡಿ.

*ಹುರಿದ ಪದಾರ್ಥಗಳು ಚರ್ಮಕ್ಕೆ ಹಾನಿ ಮಾಡುತ್ತವೆ. ಹಾಗಾಗಿ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನಬೇಡಿ.

*ಸಂಸ್ಕರಿಸಿದ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕ ಮತ್ತು ಮೊಡವೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಅವುಗಳನ್ನು ಹೆಚ್ಚು ಸೇವಿಸಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ