ರುಚಿಕರವಾದ 'ಪಾಲಕ್ ಸೊಪ್ಪಿನ ರಾಯತ’

ಶನಿವಾರ, 27 ಫೆಬ್ರವರಿ 2021 (16:35 IST)
ಬೆಂಗಳೂರು:ದಿನಾಲೂ ಒಂದೇ ತರದ ಸೊಪ್ಪಿನ ಪಲ್ಯ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ಪಾಲಕ್ ಸೊಪ್ಪಿನ ರಾಯತ ಮಾಡಿ ನೋಡಿ. 

ಬೇಕಾಗುವ ಸಾಮಗ್ರಿಗಳು :
2 ಕಪ್ ಪಾಲಕ್ ಸೊಪ್ಪು ,1 ಚಮಚ ತುಪ್ಪ ,1 ಚಮಚ ಎಣ್ಣೆ ,1 ಈರುಳ್ಳಿ,2 ಹಸಿಮೆಣಸಿನಕಾಯಿ, 1 ಕಪ್ ತೆಂಗಿನ ಕಾಯಿ ತುರಿ,1 ಇಂಚು ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು,2 ಚಮಚ ಸಾಸಿವೆ,1/4   ಲೀಟರ್ ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ :
ಮೊದಲು ಗ್ಯಾಸ್ ಆನ್ ಮಾಡಿ ಒಂದು ಬಾಣಲೆ ಇಟ್ಟು ಅದು ಬಿಸಿಯಾದ ಮೇಲೆ ಒಂದು ಚಮಚ ಎಣ್ಣೆ ಹಾಕಿ ಕಾದ ಮೇಲೆ ಹೆಚ್ಚಿದ ಪಾಲಕ್ ಸೊಪ್ಪು ಹಾಕಿ ಹಸಿವಾಸನೆ ಹೋಗುವವರೆಗೂ ಬಾಡಿಸಿ. ಅದು ಆರಿದ ಮೇಲೆ ಅದಕ್ಕೆ ಸ್ವಲ್ಪ ತೆಂಗಿನಕಾಯಿ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಮತ್ತೆ ಬಾಣಲೆ ಇಟ್ಟು ಒಂದು ಚಮಚ ತುಪ್ಪ ಹಾಕಿ ಫ್ರೈ ಮಾಡಿಕೊಳ್ಳಿ ಒಂದು ಬೌಲ್ ಗೆ ರುಬ್ಬಿದ ಪಾಲಕ್ ಮಿಶ್ರಣ ಬಾಡಿಸಿದಾಗ ಈರುಳ್ಳಿ ಒಂದು ಕಾಲು ಲೀಟರ್ ಮೊಸರು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಬಿಸಿ ಬಿಸಿ ಅನ್ನದ ಜೊತೆ ಪಾಲಕ್ ಸೊಪ್ಪಿನ ರಾಯತ ತಿನ್ನಲು ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ