ಬೆಂಗಳೂರು: ಪಪ್ಪಾಯ ಹಣ್ಣು ನಮ್ಮ ದೇಹಕ್ಕೆ ಒಳ್ಳೆಯದು. ಇದು ನಮ್ಮ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ಜೀರ್ಣಕ್ರಿಯೆಗೆ ಒಳ್ಳೆಯದು.. ಹೀಗೇ ಸಾಕಷ್ಟು ಉತ್ತಮ ಗುಣಗಳ ಬಗ್ಗೆ ಕೇಳಿದ್ದೇವೆ. ಆದರೆ ಪಪ್ಪಾಯ ತಿನ್ನುವುದು ಎರಡು ರೀತಿಯಿಂದ ನಮ್ಮ ದೇಹಕ್ಕೆ ತೊಂದರೆ ಉಂಟು ಮಾಡಬಹುದು.
ಮೊದಲನೆಯದಾಗಿ ಗರ್ಭಿಣಿ ಮಹಿಳೆಯರು ಇದನ್ನು ಸೇವಿಸುವುದು ಅಪಾಯ. ಇದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಪಪ್ಪಾಯ ತಿನ್ನುವುದರಿಂದ ಗರ್ಭಪಾತವಾಗುವ ಅಪಾಯವಿದೆ. ಇದು ಗರ್ಭಕೋಶದ ಮೇಲೆ ಪರಿಣಾಮ ಬೀರುವುದರಿಂದ ಪಪ್ಪಾಯ ಹಣ್ಣಿನ ಬೀಜ, ಬೇರು ಗರ್ಭಪಾತಕ್ಕೆ ಕಾರಣವಾಗಬಹುದು.
ಇನ್ನೊಂದು ಪಪ್ಪಾಯದ ಕೆಟ್ಟ ಗುಣವೆಂದರೆ, ಅದು ನಮ್ಮ ಆಹಾರ ನಳಿಕೆಯನ್ನು ಹಾನಿಗೊಳಿಸಬಹುದು. ಹಾಗಾಗಿ ಪ್ರತಿನಿತ್ಯ ಒಂದು ಕಪ್ ಗಿಂತ ಹೆಚ್ಚು ಪಪ್ಪಾಯ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ