ಈ ಸಮಸ್ಯೆ ಇರುವವರು ಪಾಲಕ್ ಸೊಪ್ಪು ಮತ್ತು ಟೊಮೆಟೊವನ್ನು ಸೇವಿಸಬೇಡಿ
ಗುರುವಾರ, 31 ಡಿಸೆಂಬರ್ 2020 (11:00 IST)
ಬೆಂಗಳೂರು : ಪಾಲಕ್ ಮತ್ತು ಟೊಮೆಟೊ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ದೇಹಕ್ಕೆ ಹಲವು ಬಗೆಯ ಪೋಷಕಾಂಶಗಳು ದೊರೆಯುತ್ತದೆ. ಆದರೆ ಈ ಸಮಸ್ಯೆ ಇರುವವರು ಇವೆರಡನ್ನು ಸೇವಿಸದಿರುವುದೇ ಉತ್ತಮ.
ಪಾಲಕ್ ಸೊಪ್ಪು ಮತ್ತು ಟೊಮೆಟೊವನ್ನು ಮೂತ್ರಪಿಂಡದ ಕಲ್ಲಾಗುವಂತಹ ಸಮಸ್ಯೆ ಇರುವವರು ಸೇವಿಸಬಾರದು. ಯಾಕೆಂದರೆ ಇವೆರಡರಲ್ಲಿ ಮೂತ್ರಪಿಂಡದಲ್ಲಿ ಉತ್ಪತ್ತಿಯಾಗುವಂತಹ ಆಕ್ಸಲೆಟ್ ಎಂಬ ಪದಾರ್ಥವಿರುತ್ತದೆ. ಇದರಿಂದ ಮೂತ್ರಪಿಂಡದಲ್ಲಿ ಕಲ್ಲು ಉತ್ಪತ್ತಿಯಾಗುತ್ತದೆ.
ಹಾಗಾಗಿ ಒಂದು ವೇಳೆ ಇದನ್ನು ಸೇವಿಸಿದವರು ಚೆನ್ನಾಗಿ ನೀರನ್ನು ಕುಡಿಯಿರಿ. ಮತ್ತು ಮೂತ್ರಪಿಂಡದಲ್ಲಿ ಕಲ್ಲಾಗುವ ಸಮಸ್ಯೆ ಇರುವವರು ಮತ್ತು ನೀರು ಕಡಿಮೆ ಕುಡಿಯುವವರು ಇದನ್ನು ಸೇವಿಸಲೇಬೇಡಿ.