ಬೆಂಗಳೂರು : ಕಹಿಬೇವಿನ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಇದರಿಂದ ಕೆಲವು ಅಡ್ಡಪರಿಣಾಮಗಳಿಗೆ. ಆದಕಾರಣ ಈ ಸಮಸ್ಯೆ ಇರುವವರು ಕಹಿಬೇವನ್ನು ಸೇವಿಸಬೇಡಿ.
ಗರ್ಭಿಣಿ ತಾಯಂದಿರು ಹಾಗೂ ಹಾಲುಣಿಸುವ ತಾಯಂದಿರು ಈ ಕಹಿಬೇವಿನ ಸೊಪ್ಪನ್ನು ತಿನ್ನಬಾರದು. ಯಾಕೆಂದರೆ ಗರ್ಭಿಣಿಯರು ತಿಂದರೆ ಗರ್ಭಪಾತವಾಗುವ ಸಂಭವವಿದೆ. ಹಾಲುಣಿಸುವ ತಾಯಂದಿರು ಸೇವಿಸಿದರೆ ಮಗು ಹಾಲು ಕುಡಿಯದೆ ಇರಬಹುದು.
ಉಪವಾಸ ಮಾಡುವವರು ಕಹಿಬೇವಿನ ಸೊಪ್ಪನ್ನು ತಿನ್ನಬೇಡಿ. ಯಾಕೆಂದರೆ ಉಪವಾಸದಿಂದ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುತ್ತದೆ. ಇದನ್ನು ತಿನ್ನುವುದರಿಂದ ಮತ್ತೆ ಶುಗರ್ ಲೆವೆಲ್ ಕಡಿಮೆಯಾಗಿ ಆಯಾಸವಾಗುತ್ತದೆ. ಕಹಿಬೇವು ತಿಂದಾಗ ವಾಂತಿ, ತಲೆಸುತ್ತು, ಅಲರ್ಜಿಯಾದವರು ಮತ್ತೆ ಅದನ್ನು ಸೇವಿಸಬೇಡಿ.