ಈ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ರಾತ್ರಿ ವೇಳೆ ಮೊಸರು ಸೇವಿಸಬೇಡಿ
ಸೋಮವಾರ, 29 ಜುಲೈ 2019 (08:52 IST)
ಬೆಂಗಳೂರು : ಹಾಲು ಮತ್ತು ಮೊಸರು ಆರೊಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಮೊಸರು ತಿನ್ನುವುದರಿಂದ ರೋಗಗಳು ನಮ್ಮ ಬಳಿ ಸುಳಿಯುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈ ಕಾಯಿಲೆಯಿಂದ ಬಳಲುತ್ತಿರುವವರು ಮಾತ್ರ ರಾತ್ರಿ ಹೊತ್ತು ಮೊಸರು ಸೇವನೆಯಿಂದ ದೂರವಿದ್ದರೆ ಉತ್ತಮ.
ಹೌದು. ಮೊಸರಿನಲ್ಲಿ ಸಿಹಿ ಮತ್ತು ಹುಳಿ ಅಂಶವಿರುವುದರಿಂದ ಇದು ನಮ್ಮ ದೇಹದಲ್ಲಿ ಕಫದ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗೇ ರಾತ್ರಿ ವೇಳೆ ನಮ್ಮ ದೇಹದಲ್ಲಿ ಕಫ ಸಂಗ್ರಹವಾಗುವುದರಿಂದ ರಾತ್ರಿ ವೇಳೆ ಮೊಸರು ಸೇವಿಸಿದರೆ ಕಫ ಮತ್ತು ನೆಗಡಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಾಗೇ ಯಾರಿಗೆ ತಂಪಾದ ವಸ್ತುಗಳನ್ನು ತಿನ್ನುವುದರಿಂದ ನೆಗಡಿ ಹಾಗೂ ಕಫ ಆಗುವ ಸಾಧ್ಯತೆ ಇರುತ್ತದೆಯೋ ಅಂತವರು ಈ ಮೊಸರಿನಿಂದ ದೂರವಿರಬೇಕು. ಧೂಳಿನ ಅಲರ್ಜಿ ಇರುವವರು ಕೂಡ ರಾತ್ರಿ ವೇಳೆ ಮೊಸರು ಸೇವಿಸಬಾರದು. ಈ ಸಮಸ್ಯೆ ಹೊರತುಪಡಿಸಿ ಉಳಿದವರು ರಾತ್ರಿ ವೇಳೆ ಮೊಸರು ಸೇವಿಸಿದರೆ ಒಳ್ಳೆಯದು ಎನ್ನಲಾಗಿದೆ.