ಗರ್ಭಿಣಿಯರು ದಾಳಿಂಬೆ ಹಣ್ಣು ಸೇವಿಸುವ ಮುನ್ನ ಎಚ್ಚರ

ಗುರುವಾರ, 11 ಅಕ್ಟೋಬರ್ 2018 (13:31 IST)
ಬೆಂಗಳೂರು : ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು . ಆದರೆ ಗರ್ಭಿಣಿಯರು ಇದನ್ನು ಸೇವಿಸುವಾಗ ಸ್ವಲ್ಪ ಎಚ್ಚರದಿಂದಿರಬೇಕು. ಯಾಕೆಂದರೆ ಇದರಿಂದ ಅವರಿಗೆ ಉಪಯೋಗಗಳ ಜೊತೆಗೆ ಅಪಾಯವು ಇದೆ.


ಹೌದು. ಗರ್ಭಿಣಿಯರು ದಾಳಿಂಬೆ ಹಣ್ಣು ಸೇವಿಸುವುದರಿಂದ ಮಲಬದ್ಧತೆಯಂತಹ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ  ಪ್ರತಿನಿತ್ಯ ಬೇಕಾಗಿರುವ ಕಬ್ಬಿಣದ ಅಂಶ ಸಿಗುತ್ತದೆ. ಆದರೆ ಗರ್ಭಿಣಿ ಮಹಿಳೆಯರು ದಾಳಿಂಬೆ ಸೇವಿಸಿದರೆ ಎಷ್ಟು ಲಾಭವಿದಯೋ ಅದರಿಂದ ಅಪಾಯ ಕೂಡ ಇದೆ.


*ದಾಳಿಂಬೆ ಸೇವನೆ ಮಾಡುವಾಗ ಅದರ ಸಿಪ್ಪೆಯ ಅಂಶವನ್ನು ಸೇವಿಸಿದರೆ ಅಕಾಲಿಕ ಹೆರಿಗೆಯಾಗುವ ಸಾಧ್ಯತೆಯಿದೆ.
*ಗರ್ಭಿಣಿ ಮಹಿಳೆಯರಿಗೆ ನೀಡಲಾಗುವಂತಹ ಕಬ್ಬಿಣದ ಅಂಶವಿರುವ ಮಾತ್ರೆ ಮತ್ತು ಕ್ಯಾಲ್ಸಿಯಂ ಮಾತ್ರೆ ಬಿಟ್ಟು ಬೇರೆ ಯಾವುದೇ ಮಾತ್ರೆಗಳ ಸೇವನೆ ಮಾಡುತ್ತಿದ್ದರೆ, ನೀವು ವೈದ್ಯರ ಸಲಹೆ ಪಡೆದ ಬಳಿಕ ದಾಳಿಂಬೆ ಸೇವಿಸುವುದು ಉತ್ತಮ.


* ರಕ್ತದೊತ್ತಡ ಮತ್ತು ರಕ್ತ ತೆಳುಗೊಳಿಸುವ ಔಷಧಿ ಸೇವನೆ ಮಾಡುತ್ತಿದ್ದರೆ ದಾಳಿಂಬೆ ಸೇವಿಸದಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ