ಗಾಯದ ಕಲೆಗಳು ವಾಸಿಯಾಗಲು ಈ ಎಣ್ಣೆಯನ್ನು ಪ್ರತಿದಿನ ಹಚ್ಚಿ

ಭಾನುವಾರ, 2 ಜೂನ್ 2019 (06:59 IST)
ಬೆಂಗಳೂರು : ಚಿಕ್ಕ ವಯಸ್ಸಿನಲ್ಲಿ ಆಟವಾಡುವಾಗ ಆದ ಗಾಯಗಳು ಗುಣವಾದರೂ ಅದರ  ಕಲೆಗಳು ಹಾಗೇ ಉಳಿದುಕೊಂಡಿರುತ್ತದೆ. ಈ ಕಲೆಗಳು ಕೆಲವೊಮ್ಮೆ ನಮ್ಮ ಅಂದವನ್ನು ಕೆಡಿಸಬಹುದು. ಅದಕ್ಕಾಗಿ ಈ ಕಲೆಗಳು ವಾಸಿಯಾಗಬೇಕೆಂದರೆ ಈ ಎಣ್ಣೆಗಳನ್ನು ಬಳಸಿ.




* ಗುಲಾಬಿ ತೈಲವನ್ನು  ಸ್ನಾನ ಮಾಡುವಾಗ ಕೆಲವು ಹನಿಗಳಷ್ಟು ನೀರಿಗೆ ಹಾಕಿಕೊಂಡು ಸ್ನಾನ ಮಾಡಿದರೆ ಗಾಯದ ಗುರುತುಗಳು ವಾಸಿಯಾಗುತ್ತದೆ.

*ತೆಂಗಿನಎಣ್ಣೆಗೆ ಕೆಲವು ಹನಿ ನಿಂಬೆ ರಸ ಸೇರಿಸಿ ಕಲೆಯ ಮೇಲೆ ಪ್ರತಿನಿತ್ಯ ಲೇಪಿಸಿದರೆ ಗುರುತು ನೈಸರ್ಗಿಕವಾಗಿ ವಾಸಿಯಾಗುತ್ತದೆ.


*ಕೆಲವು ವಾರಗಳ ಮಟ್ಟಿಗೆ ಸಾಸಿವೆ ಎಣ್ಣೆಯನ್ನು ನಿಮ್ಮ ತ್ವಚೆಗೆ ಲೇಪಿಸಿದರೆಗಾಯದ ಗುರುಗಳು ಸಂಪೂರ್ಣವಾಗಿ ಮಯವಾಗುತ್ತವೆ.

* ಈಗ ತಾನೇ ಆದ ಗಾಯಕ್ಕೆ ಲ್ಯಾವೆಂಡರ್‌ ಆಯಿಲ್‌ ಜೊತೆ ಕೆಲವು ಹನಿ ನೀರನ್ನು ಹಾಕಿ ಗಾಯಕ್ಕೆ ಹಚ್ಚಿದರೆ ಬಹಳ ಬೇಗ ವಾಸಿಯಾಗುತ್ತದೆ. ಹಳೆಯ ಗಾಯದ ಗುರುತನ್ನು ವಾಸಿಮಾಡಲು ಲ್ಯಾವೆಂಡರ್ ಆಯಿಲ್ ಜೊತೆಗೆ ಬೇರೆ ಯಾವುದಾದರೂ ಎಣ್ಣೆಯನ್ನು ಸೇರಿಸಿ 2 ವಾರಗಳ ಕಾಲ ಹಚ್ಚಿ.             


* ಶುದ್ದವಾದ ಆಲೀವ್‌ ಆಯಿಲ್‌ ಬಳಸಿದರೆ ಬಹುಬೇಗನೆ ಗಾಯದ ಗುರುತನ್ನು ವಾಸಿಮಾಡಿಕೊಳ್ಳಬಹುದು ಅಷ್ಟೆ ಅಲ್ಲದೆ ಆಲೀವ್‌ ಎಣ್ಣೆ ನಮ್ಮ ತ್ವಚೆ ಯ ಡೇಡ್‌ ಸೆಲ್ಸ್‌ಗಳನ್ನು ತೆಗೆಯುವಲ್ಲೂ ಕೂಡ ಸಹಾಯ ಮಾಡುತ್ತದೆ.



 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ