ರಾತ್ರಿ ನಿದ್ದೆಗೆ ರಾಮಬಾಣ ಹಾಲು! ತಪ್ಪದೇ ಟ್ರೈ ಮಾಡಿ

ಬುಧವಾರ, 27 ಅಕ್ಟೋಬರ್ 2021 (07:08 IST)
ಆರೋಗ್ಯವಾಗಿರಲು ರಾತ್ರಿಯ ನಿದ್ದೆ ಬಹಳ ಮುಖ್ಯ. ಮರುದಿನ ಮತ್ತೆ ಹೊಸ ಚೈತನ್ಯ ಮತ್ತು ಉಲ್ಲಾಸವನ್ನು ಅನುಭವಿಸಲು ನಿದ್ದೆ ಸಹಾಯ ಮಾಡುತ್ತದೆ.
ಇದು ದಿನದ ಎಲ್ಲಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಪ್ರತಿಯೊಬ್ಬರೂ ರಾತ್ರಿಯಲ್ಲಿ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಿಲ್ಲ. ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ.
ಸರಿಯಾಗಿ ನಿದ್ದೆ ಬಾರದೇ ಇದ್ದರೆ ಭವಿಷ್ಯದಲ್ಲಿ ಇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ವೈದ್ಯರನ್ನು ಸಂಪರ್ಕಿಸಬಹುದು ಅಥವಾ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇಲ್ಲವಾದಲ್ಲಿ ಉತ್ತಮ ನಿದ್ದೆಗಾಗಿ ಗೋಡಂಬಿ ಹಾಲನ್ನು ಸೇವಿಸಬಹುದು. ಇದು ತುಂಬಾ ಪರಿಣಾಮಕಾರಿ.
ಗೋಡಂಬಿ ಹಾಲು ತಯಾರಿಸುವ ವಿಧಾನ


3-4 ಗೋಡಂಬಿ ತೆಗೆದುಕೊಂಡು ಅವುಗಳನ್ನು ಒಂದು ಕಪ್ ಹಾಲಿನಲ್ಲಿ ನೆನೆಸಿ. ಇದನ್ನು 4-5 ಗಂಟೆಗಳ ಕಾಲ ನೆನೆಯಲು ಬಿಡಿ. ಈಗ ನೆನೆಸಿದ ಗೋಡಂಬಿಯನ್ನು ತೆಗೆದುಕೊಂಡು ಪುಡಿಮಾಡಿ. ನಂತರ ಅವುಗಳನ್ನು ಹಾಲಿನೊಂದಿಗೆ ಕಲಸಿ. ರುಚಿಗೆ ನೀವು ಸ್ವಲ್ಪ ಸಕ್ಕರೆಯನ್ನು ಕೂಡ ಇದಕ್ಕೆ ಸೇರಿಸಬಹುದು. ಬಳಿಕ ಇದನ್ನು ಸ್ವಲ್ಪ ಸಮಯ ಕುದಿಸಿ. ಈಗ ರುಚಿಕರವಾದ ಗೋಡಂಬಿ ಹಾಲು ಸವಿಯಲು ಸಿದ್ಧ. ಮಲಗುವ ಮೊದಲು ಇದನ್ನು ಕುಡಿಯಿರಿ. ಇದು ನಿಮಗೆ ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ.
ಉತ್ತಮ ನಿದ್ದೆಗಾಗಿ ಗೋಡಂಬಿ

ಗೋಡಂಬಿ ಸೇರಿದಂತೆ ಅನೇಕ ಡ್ರೈ ಫ್ರೂಟ್ಸ್ ನಿದ್ರೆಗೆ ಉತ್ತಮವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಮೆಗ್ನೀಸಿಯಮ್ ಮತ್ತು ಜಿಂಕ್ ನಂತಹ ಅಗತ್ಯವಾದ ಖನಿಜಗಳನ್ನು ಒಳಗೊಂಡಿರುತ್ತದೆ ಮತ್ತು ಮೆಲಟೋನಿನ್ ಅನೇಕ ದೈಹಿಕ ಕಾರ್ಯಗಳಿಗೆ ಮುಖ್ಯವಾಗಿದೆ.
ಸಂಶೋಧನೆಯ ಪ್ರಕಾರ, ಮೆಲಟೋನಿನ್, ಮೆಗ್ನೀಸಿಯಮ್ ಮತ್ತು ಸತುಗಳ ಸಂಯೋಜನೆಯು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಉತ್ತಮ ನಿದ್ರೆ ಪಡೆಯಲು ಕಷ್ಟಪಡುತ್ತಿದ್ದರೆ ಗೋಡಂಬಿ ಬೀಜ ಸೇವಿಸಬಹುದು.
ಉತ್ತಮ ನಿದ್ದೆಗಾಗಿ ಹಾಲು

ಪ್ರಾಚೀನ ಕಾಲದಿಂದಲೂ ಜನರು ಮಲಗುವಾಗ ಹಾಲು ಕುಡಿಯುತ್ತಾರೆ. ಏಕೆಂದರೆ ಹಾಲು ಉತ್ತಮ ನಿದ್ದೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದಕ್ಕೆ ಕಾರಣ ಇದರಲ್ಲಿರುವ ಟ್ರಿಪ್ಟೊಫಾನ್. ವಯಸ್ಸಾದವರಲ್ಲಿ ನಿದ್ದೆ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಹಾಲು ಸಹಾಯ ಮಾಡುತ್ತದೆ. ಇದರೊಂದಿಗೆ ಹಾಲು ಸಿರೊಟೋನಿನ್ ಮತ್ತು ಮೆಲಟೋನಿನ್ ಅನ್ನು ಒಳಗೊಂಡಿರುತ್ತದೆ. ಹಾಲು ಮಕ್ಕಳಿಗೆ ಕೂಡ ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮಲಗುವ ವೇಳೆಗೆ ಹಾಲು ಕುಡಿಯುವುದು ಒಳ್ಳೆಯದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ