ಬೆಳ್ಳುಳ್ಳಿ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವಂಥಹ ವಸ್ತುವಾಗಿದೆ. ಇದನ್ನು ಸಾಮಾನ್ಯವಾಗಿ ಒಗ್ಗರಣೆಗೆ ಬಳಸಲಾಗುತ್ತದೆ. ಇದು ಯಾವುದೇ ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ಹಸಿ ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಬೆಳ್ಳುಳ್ಳಿ ಔಷಧೀಯ ಗುಣಗಳಿಂದ ತುಂಬಿದೆ. ಬೆಳ್ಳುಳ್ಳಿಯಲ್ಲಿ ಆಯಂಟಿ ಬಯೋಟಿಕ್, ಆಯಂಟಿ ವೈರಲ್, ಆಯಂಟಿ ಫಂಗಲ್, ಮ್ಯಾಂಗನೀಸ್, ಪೊಟ್ಯಾಶಿಯಂ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳಂತಹ ಗುಣಗಳಿದ್ದು, ಇದು ನಮ್ಮ ದೇಹವನ್ನು ಹಲವು ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಪ್ರಯೋಜನಗಳು ಎಷ್ಟಿವೆಯೋ ಅಷ್ಟೇ ಅನಾನುಕೂಲತೆಗಳು ಕೂಡಾ ಇವೆ. ಬೆಳ್ಳುಳ್ಳಿ ತಿನ್ನುವುದರಿಂದಾಗುವ ಲಾಭಗಳು 1. ರೋಗನಿರೋಧಕ ಶಕ್ತಿ
ಕಚ್ಚಾ ಬೆಳ್ಳುಳ್ಳಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಬಲವಾದ ರೋಗನಿರೋಧಕ ಶಕ್ತಿ ದೇಹವನ್ನು ಅನೇಕ ವೈರಲ್ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಜೇನುತುಪ್ಪದೊಂದಿಗೆ ಬೆಳ್ಳುಳ್ಳಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು. 2. ಕೊಲೆಸ್ಟ್ರಾಲ್
ಬೆಳ್ಳುಳ್ಳಿಯ ಸೇವನೆಯು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಆಗಿರುವ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 3. ರಕ್ತದೊತ್ತಡ
ನೀವು ರಕ್ತದೊತ್ತಡದ ರೋಗಿಯಾಗಿದ್ದರೆ ಬೆಳ್ಳುಳ್ಳಿ ನಿಮಗೆ ಪ್ರಯೋಜನಕಾರಿ. ಬೆಳ್ಳುಳ್ಳಿಯಲ್ಲಿರುವ ಬಯೋಆಕ್ಟಿವ್ ಸಲ್ಫರ್ ಸಂಯುಕ್ತ, ಎಸ್-ಅಲ್ಲೈಲ್ಸಿಸ್ಟೈನ್, ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದಾಗುವ ಅನಾನುಕೂಲಗಳು
1.ಆಸಿಡಿಟಿ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಆಸಿಡಿಟಿಯಿಂದ ಹೊಟ್ಟೆ ನೋವು, ವಾಯುವಿಗೆ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಆಮ್ಲೀಯತೆಯ ಸಮಸ್ಯೆಯಲ್ಲಿ ಬೆಳ್ಳುಳ್ಳಿಯ ಸೇವನೆಯು ಹಾನಿಕಾರಕವಾಗಿದೆ.
2.ಯಾರಿಗಾದರೂ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಅವರು ಬೆಳ್ಳುಳ್ಳಿಯನ್ನು ಬಳಸಬಾರದು. ಏಕೆಂದರೆ ಬೆಳ್ಳುಳ್ಳಿ ತಿನ್ನುವುದರಿಂದ ಬಾಯಿಯ ವಾಸನೆ ಮತ್ತಷ್ಟು ಹೆಚ್ಚಾಗುತ್ತದೆ.
3. ತಲೆನೋವಿನ ಸಮಸ್ಯೆ ಇದ್ದರೆ, ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸಬೇಡಿ. ಹಸಿ ಬೆಳ್ಳುಳ್ಳಿಯನ್ನು ಅಧಿಕವಾಗಿ ಸೇವಿಸುವುದರಿಂದ ತಲೆನೋವು ಉಂಟಾಗಬಹುದು.