ಕ್ಷಣಾರ್ಧದಲ್ಲಿ ಎಗ್‌ರೈಸ್ ಮಾಡಲು ಇಲ್ಲಿದೆ ಮಾಹಿತಿ

ಅತಿಥಾ

ಬುಧವಾರ, 10 ಜನವರಿ 2018 (18:48 IST)
ಬೇಕಾಗುವ ಸಾಮಾಗ್ರಿಗಳು-
ಬೇಯಿಸಿದ ಅನ್ನ - ಒಂದು ಕಪ್
ಹಸಿಮೆಣಸಿನ ಕಾಯಿ – 2-3
ಈರುಳ್ಳಿ ಹೆಚ್ಚಿದ್ದು – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಅರಿಶಿನ -ಸ್ವಲ್ಪ
ಧನಿಯಾ ಪುಡಿ - 1/2 ಚಮಚ
ಖಾರದ ಪುಡಿ - 1/2 ಚಮಚ
ಕೊತ್ತಂಬರಿ/ ಪುದೀನ ಸೊಪ್ಪು - ಸ್ವಲ್ಪ
ಚಕ್ಕೆ, ಲವಂಗ, ಏಲಕ್ಕಿ - 2
ಬಿರಿಯಾನಿ ಎಲೆ - 1
ನಿಂಬೆರಸ - 1  ಚಮಚ
ಉಪ್ಪು
ಎಣ್ಣೆ - 3 ದೊಡ್ಡ ಚಮಚ
ಬೇಯಿಸಿದ ಮೊಟ್ಟೆ - 3
ಮಾಡುವ ವಿಧಾನ: 
-ಮೊದಲು ಅನ್ನ ಬೇಯಿಸಿಡಿ. 
- ಆಮೇಲೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಚಕ್ಕೆ, ಲವಂಗ, ಏಲಕ್ಕಿ, ಹೆಚ್ಚಿದ ಈರುಳ್ಳಿ, ಬಿರಿಯಾನಿ ಎಲೆ, ಸೇರಿಸಿ ಬಾಡಿಸಿ. 
- ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉದ್ದಕ್ಕೆ ಸೀಳಿದ ಹಸಿಮೆಣಸಿನ ಕಾಯಿ, ಅರಿಶಿನ, ಧನಿಯಾ ಪುಡಿ, ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು ಸೇರಿಸಿ 2 ನಿಮಿಷ ಬೇಯಿಸಿ. ಇದಕ್ಕೆ ಅನ್ನ ಹಾಕಿ ಬೆರೆಸಿ. ಮೆಲಿಂದ ನಿಂಬೆ ರಸ ಹಿಂಡಿ. ಬೇಯಿಸಿದ ಮೊಟ್ಟೆಯನ್ನು ಕತ್ತರಿಸಿ ಇದಕ್ಕೆ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿದರೆ ಎಗ್‌ರೆಸ್ ರೆಡಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ