ಮಕ್ಕಳಿಗೆ ಆರೋಗ್ಯಕರವಾದ ಹಾಲಿನ ಪೊಂಗಲ್

ಶನಿವಾರ, 16 ಡಿಸೆಂಬರ್ 2017 (06:47 IST)
ಬೆಂಗಳೂರು: ಹೆಚ್ಚಿನ ಮಕ್ಕಳು ಹಾಲನ್ನು ಕುಡಿಯುವುದಿಲ್ಲ. ಹಾಲನ್ನು ನೋಡಿದ ತಕ್ಷಣ ಅಲ್ಲಿಂದ ಓಡಿಹೋಗುತ್ತಾರೆ. ಅವರಿಗೆ ಹಾಲು ಕುಡಿಸುವುದು ಅಮ್ಮಂದಿರಿಗೆ ಒಂದು ದೊಡ್ಡ ಸವಾಲೆ ಸರಿ. ಆದ್ದರಿಂದ ನಿಮ್ಮ ಮಕ್ಕಳಿಗೆ ಹಾಲಿನ ಪೊಂಗಲ್ ಮಾಡಿಕೊಡಿ. ಇದರಲ್ಲಿ ಹಾಲು, ಬೆಲ್ಲ, ತುಪ್ಪವೆಲ್ಲಾ ಇರುವುದರಿಂದ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು.


ಬೇಕಾಗುವ ಸಾಮಾಗ್ರಿಗಳು:
ಅಕ್ಕಿ 1ಕಪ್, ಹಾಲು 10 ಕಪ್, ಏಲಕ್ಕಿ ಪುಡಿ ¼ ಚಮಚ, ಬೆಲ್ಲದ ಪುಡಿ 11/2 ಕಪ್, ಹೆಸರುಬೇಳೆ ½ ಕಪ್, 3-4 ಚಮಚ ತುಪ್ಪ, ಸ್ವಲ್ಪ ಗೋಡಂಬಿ, ದ್ರಾಕ್ಷಿ.


ಮಾಡುವ ವಿಧಾನ:
ಮೊದಲು ಅಕ್ಕಿಯನ್ನು ತೊಳೆದು ಒಂದು ಕುಕ್ಕರನಲ್ಲಿ ಹಾಲು ಮತ್ತು ಅಕ್ಕಿ ಹಾಕಿ ಬೇಯಿಸಿಕೊಳ್ಳಿ. ಹೆಸರು ಬೇಳೆಯನ್ನು ಬೇರೆಯಾಗಿ ಬೇಯಿಸಿಕೊಳ್ಳಿ. ಎರಡು ಪದಾರ್ಥಗಳು ಬೆಂದ ನಂತರ ಎರಡನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಕುದಿಯಲು ಬಿಡಿ. ನಂತರ ಅದಕ್ಕೆ ಬೆಲ್ಲವನ್ನು ಸೇರಿಸಿ, ಬೆಲ್ಲ ಚೆನ್ನಾಗಿ ಕರಗುವವರೆಗೂ ಕೈಯಾಡಿಸಿ.ನಂತರ ಅದಕ್ಕೆ ಗಟ್ಟಿಯಾದ ಹಾಲನ್ನು ಸೇರಿಸಿ, ದ್ರಾಕ್ಷಿ, ಗೋಡಂಬಿ(ಮೊದಲೆ ತುಪ್ಪದಲ್ಲಿ ಹುರಿದಿಟ್ಟುಕೊಂಡಿರಬೇಕು) ಹಾಕಿ, ಏಲಕ್ಕಿ ಪುಡಿ ಸೇರಿಸಿ. ಬಿಸಿಯಾಗಿ ಇರುವಾಗಲೇ ಬಡಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ