ಗುಪ್ತಾಂಗದ ಮೇಲಿನ ಕೂದಲನ್ನು ಶೇವ್ ಮಾಡಿದ ತಕ್ಷಣ ಸಂಭೋಗದಲ್ಲಿ ತೊಡಗಿದರೆ ಏನಾಗುತ್ತದೆ ಗೊತ್ತಾ?
ಮಂಗಳವಾರ, 25 ಜೂನ್ 2019 (08:36 IST)
ಬೆಂಗಳೂರು : ಲೈಂಗಿಕತೆಯ ವಿಚಾರದಲ್ಲಿ ಮಹಿಳೆ ಹಾಗೂ ಪುರುಷರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಸಿಗುವ ಆನಂದಕ್ಕಿಂತ ಅಪಾಯವೇ ಹೆಚ್ಚು. ಅದರಲ್ಲಿ ಗುಪ್ತಾಂಗಗಳ ಮೇಲಿನ ಕೂದಲನ್ನು ಶೇವ್ ಮಾಡುವುದು ಕೂಡ ಒಂದು.
ಕೆಲವರು ಗುಪ್ತಾಂಗಗಳ ಮೇಲಿನ ಕೂದಲನ್ನು ಶೇವ್ ಮಾಡುವುದರಿಂದ ಸಂಭೋಗದ ವೇಳೆ ಯಾವುದೇ ಕಿರಿಕಿರಿ ಉಂಟಾಗುವುದಿಲ್ಲ ಎಂದು ಭಾವಿಸುತ್ತಾರೆ. ಇದು ನಿಜನೇ? ಆದರೆ ಶೇವ್ ಮಾಡಿದ ತಕ್ಷಣ ಸಂಭೋಗದಲ್ಲಿ ತೊಡಗುವುದು ತುಂಬಾ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ.
ಶೇವ್ ಮಾಡಿದ ಸಂದರ್ಭದಲ್ಲಿ ಆ ಜಾಗ ಮತ್ತಷ್ಟು ಸೆನ್ಸಿಟಿವ್ ಆಗುತ್ತದೆ. ಜೊತೆಗೆ ಚರ್ಮದ ಮೇಲಿನ ತೆಳು ಪದರ ಕಿತ್ತು ಹೋಗಿರುವ ಸಾಧ್ಯತೆ ಇರುತ್ತದೆ. ಇದರಿಂದ ಕಿರಿಕಿರಿ ಉಂಟಾಗಲೂಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.