ರುಚಿ ರುಚಿಯಾದ ಕ್ಯಾರೆಟ್ ಪಾಯಸ

ಶುಕ್ರವಾರ, 10 ಜುಲೈ 2020 (09:03 IST)
Normal 0 false false false EN-US X-NONE X-NONE

ಬೆಂಗಳೂರು : ಕ್ಯಾರೆಟ್ ಯಿಂದ ಹಲ್ವಾ ತಯಾರಿಸತ್ತಾರೆ. ಅದೇರೀತಿ ಕ್ಯಾರೆಟ್ ಬಳಸಿ ಪಾಯಸ ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
 

ಬೇಕಾಗುವ ಸಾಮಾಗ್ರಿಗಳು : ಕ್ಯಾರೆಟ್ ¼ ಕೆ.ಜಿ., ಹಾಲು ½ ಲೀಟರ್, ತುಪ್ಪ 100 ಗ್ರಾಂ, ಸಕ್ಕರೆ 100ಗ್ರಾಂ, ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ 1 ಕಪ್.

ಮಾಡುವ ವಿಧಾನ : ಕ್ಯಾರೆಟ್ ನ್ನು ತುರಿದುಕೊಳ್ಳಿ. ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಗೋಡಂಬಿ, ಬಾದಾಮಿ, ತುರಿದ ಕ್ಯಾರೆಟ್, ಹಾಲು ಹಾಕಿ ಬೇಯಿಸಿಕೊಳ್ಳಿ. ಕ್ಯಾರೆಟ್ ಬೆಂದ ನಂತರ ಅದನ್ನು ರುಬ್ಬಿ.  ಇನ್ನೊಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ರುಬ್ಬಿದ ಕ್ಯಾರೆಟ್, ಹಾಲು, ಸಕ್ಕರೆ ಹಾಕಿ ಕುದಿಸಿ. ಕೊನೆಗೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಹಾಕಿ ಮಿಕ್ಸ್ ಮಾಡದರೆ ಕ್ಯಾರೆಟ್ ಪಾಯಸ ರೆಡಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ