ವೆಜ್ ಆಮ್ಲೇಟ್ ಮಾಡುವುದು ಹೇಗೆ ಗೊತ್ತಾ?

ಸೋಮವಾರ, 29 ಜೂನ್ 2020 (07:54 IST)
ಬೆಂಗಳೂರು : ಮೊಟ್ಟೆಯಿಂದ ಆಮ್ಲೇಟ್ ತಯಾರಿಸುತ್ತಾರೆ. ಆದರೆ ಮೊಟ್ಟೆ ಇಲ್ಲದೆ ವೆಜ್ ಆಮ್ಲೇಟ್ ತಯಾರಿಸಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಬೇಕಾಗುವ ಸಾಮಾಗ್ರಿಗಳು : ಕಡಲೆಹಿಟ್ಟು 1 ಕಪ್, ಓಂಕಾಳು ¼ ಚಮಚ, ಉಪ್ಪು, ಅರಶಿನ ಪುಡಿ 1 ಚಿಟಿಕೆ, ಈರುಳ್ಳಿ 2, ಟೊಮೆಟೊ 1, ಹಸಿಮೆಣಸಿನ ಕಾಯಿ 1, ಕೊತ್ತಂಬರಿ ಸೊಪ್ಪು ಸ್ವಲ್ಪ , ಶುಂಠಿ ಸ್ವಲ್ಪ, ಎಣ್ಣೆ ಸ್ವಲ್ಪ.

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅರಶಿನ, ಓಂಕಾಳು, ಉಪ್ಪು, ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 30 ನಿಮಿಷ ನೆನೆಯಲು ಬಿಡಿ. ಬಳಿಕ ಇದಕ್ಕೆ ಊರುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಟೊಮೆಟೊ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಲೆಯ ಮೇಲೆ ತವಾ ಬಿಸಿ ಮಾಡಿ ಅದಕ್ಕೆ ಎಣ್ಣೆ ಸವರಿ ದೋಸೆ ಹಾಕಿ ಭೆಯಿಸಿದರೆ ವೆಜ್ ಆಮ್ಲೇಟ್ ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ