Health Tips: ನೆಲ್ಲಿಕಾಯಿ ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚಾಗಿ ಲಭಿಸುತ್ತದೆ. ಈ ಹಣ್ಣು ಅದರ ಅಸಾಮಾನ್ಯ ರುಚಿಗೆ ವಿಶೇಷವಾಗಿ ಪ್ರಸಿದ್ಧ. ವಿವಿಧ ರುಚಿಗಳ ಮಿಶ್ರಣವನ್ನು ಹೊಂದಿರುತ್ತದೆ. ನಿಯಮಿತವಾಗಿ ಆಮ್ಲಾ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಮತ್ತು ಆಮ್ಲಾ ಪೋಷಕಾಂಶಗಳ ಶಕ್ತಿಕೇಂದ್ರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಕಹಿಯಾದರೂ ಉತ್ತಮ ಎಂಬ ಗಾದೆಯನ್ನ ನೀವು ಕೇಳಿರಬೇಕು. ನಮ್ಮ ಹಿರಿಯರು ಹೇಳುವುದನ್ನು ನಾವು ಕೇಳಿದ್ದೇವೆ. ಗಹಾಗೆಯೆ ಹಾಗಲಕಾಯಿ, ಎಲೆಕೋಸು, ಮೂಲಂಗಿಯನ್ನು ಹೆಚ್ಚು ಸೇವನೆ ಮಾಡುವುದು ಆರೋಗ್ಯಕ್ಕೆ ಬಹಳ ಪ್ರಯೋಜನ ನೀಡುತ್ತದೆ ಎಂಬುದು ನಮಗೆ ತಿಳಿದಿರುವ ವಿಚಾರ. ಹಾಗೆಯೇ ನೆಲ್ಲಿಕಾಯಿ ಯಾರಿಗೆ ತಾನೇ ಗೊತ್ತಿಲ್ಲ. ಸ್ವಲ್ಪ ಹುಳಿ, ಸ್ವಲ್ಪ ಕಹಿ ಇರುವ ಈ ಕಾಯಿ ಬಹಳಷ್ಟು ಜನರಿಗೆ ಇಷ್ಟ. ಆದರೆ ಅನೆಕರು ಇದನ್ನು ಸೇವನೆ ಮಾಡಲು ಹಿಂದೆ ಮುಂದೆ ಯೋಚನೆ ಮಾಡುತ್ತಾರೆ. ಯಾಕೆಂದರೆ ಅದರ ಕಹಿ ಅಂಶ. ಆದರೆ ಈ ನೆಲ್ಲಿಕಾಯಿ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ಸಿಗುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ.
ಆಮ್ಲಾ ಹಸಿರು ಬಣ್ಣದ ಕಾಯಿಯಾಗಿದ್ದು, ಸಂಸ್ಕೃತದ 'ಅಮಲಕಿ' ಎಂಬ ಪದದಿಂದ ಇದರ ಹೆಸರನ್ನು ಪಡೆಯಲಾಗಿದೆ ಅಂದರೆ "ಜೀವನದ ಅಮೃತ" ಎಂದು ಅರ್ಥ. ಆಮ್ಲಾ ಭಾರತದಲ್ಲಿ ಅನೇಕ ಆರೋಗ್ಯ ಪ್ರಯೋಜನಗಳು ಮತ್ತು ಅಸಂಖ್ಯಾತ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಗುಣಗಳಿಗೆ ಪ್ರಸಿದ್ದವಾಗಿದೆ. ಆಯುರ್ವೇದವು ಆಮ್ಲಾ ನಮ್ಮ ದೇಹದಲ್ಲಿನ ಮೂರು ದೋಷಗಳನ್ನು ಸಮತೋಲನಗೊಳಿಸುತ್ತದೆ ಎಂದು ಹೇಳುತ್ತದೆ, ಅವುಗಳೆಂದರೆ: ಕಫ, ವಾತ, ಪಿತ್ತ, ಇದರಿಂದಾಗಿ ಅನೇಕ ರೋಗಗಳ ಮೂಲ ಕಾರಣವನ್ನು ತೆಗೆದುಹಾಕುತ್ತದೆ.
ನೆಲ್ಲಿಕಾಯಿ ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚಾಗಿ ಲಭಿಸುತ್ತದೆ. ಈ ಹಣ್ಣು ಅದರ ಅಸಾಮಾನ್ಯ ರುಚಿಗೆ ವಿಶೇಷವಾಗಿ ಪ್ರಸಿದ್ಧ. ವಿವಿಧ ರುಚಿಗಳ ಮಿಶ್ರಣವನ್ನು ಹೊಂದಿರುತ್ತದೆ. ನಿಯಮಿತವಾಗಿ ಆಮ್ಲಾ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಮತ್ತು ಆಮ್ಲಾ ಪೋಷಕಾಂಶಗಳ ಶಕ್ತಿಕೇಂದ್ರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆಮ್ಲಾದಲ್ಲಿ ಕಿತ್ತಳೆಗಿಂತ ಎಂಟು ಪಟ್ಟು ಹೆಚ್ಚು ವಿಟಮಿನ್ ಸಿ ಇದೆ, ಇದು ಅಕಾಯ್ ಬೆರ್ರಿಗಿಂತ ಎರಡು ಪಟ್ಟು ಆ್ಯಂಟಿ ಆಕ್ಸಿಡೆಂಟ್ ಶಕ್ತಿಯನ್ನು ಹೊಂದಿದೆ. ಆಮ್ಲಾವನ್ನು ಸೂಪರ್ಫುಡ್ ಎಂದು ಕರೆಯುವುದರಲ್ಲಿ ಆಶ್ಚರ್ಯವಿಲ್ಲ. ಆಮ್ಲಾದ ವಿಟಮಿನ್ ಸಿ ಅಂಶವು ನಿಮ್ಮ ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಅತ್ಯುತ್ತಮ ಮೂಲವಾಗಿದೆ.
ಇದು ವೈರಸ್ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಮತ್ತು ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಂತಹ ವಿವಿಧ ಆರೋಗ್ಯ ಸಮಸ್ಯೆಗಳು ಬರದಂತೆ ಕಡಿಮೆ ಮಾಡುತ್ತದೆ.
ಆಮ್ಲಾ ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವ ಅದ್ಭುತ ಮೂಲವಾಗಿರುವುದರಿಂದ, ಆಮ್ಲಾ ಪೌಡರ್ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆಮ್ಲಾ ಪೌಡರ್ ಅನ್ನು ಎರಡು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸಿದಾಗ ಕೆಮ್ಮು ಮತ್ತು ನೆಗಡಿ ಕಡಿಮೆಯಾಗುತ್ತದೆ. ಆಮ್ಲಾ ಕಫವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಉರಿಯೂತದ ಶಮನಗೊಳಿಸುತ್ತದೆ. ಆದ್ದರಿಂದ, ಆಮ್ಲಾವನ್ನು ಬ್ರಾಂಕೈಟಿಸ್, ಕೆಮ್ಮು ಮತ್ತು ಇತರ ಉಸಿರಾಟದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಆಮ್ಲಾದಲ್ಲಿರುವ ಅಂಶಗಳು ಜೀರ್ಣಾಂಗ ವ್ಯವಸ್ಥೆಯನ್ನು ಸಮತೋಲನಗೊಳಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ. ಆಮ್ಲಾದಲ್ಲಿ ಹೆಚ್ಚಿನ ಫೈಬರ್ ಅಂಶವು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಗೆ ಅತ್ಯುತ್ತಮವಾಗಿದೆ. ಆಮ್ಲಾ ಕೂಡ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ, ಆದ್ದರಿಂದ ಒಣಗಿದ ಆಮ್ಲಾ ಪುಡಿಯನ್ನು ಹೈಪರ್ ಆಸಿಡಿಟಿಯನ್ನು ಗುಣಪಡಿಸಲು ಮತ್ತು ಹೊಟ್ಟೆಯ ಹುಣ್ಣುಗಳನ್ನು ತಡೆಯಲು ಬಳಸಬಹುದು.
ಆಮ್ಲಾ ಜ್ಯೂಸ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸುವುದರಿಂದ ತಮ್ಮ ತೂಕವನ್ನು ಇಳಿಸಿಕೊಳ್ಳಲು ಪರದಾಡುತ್ತಿರುವ ಜನರಿಗೆ ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಆಮ್ಲಾ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಒಂದು ಚಿಟಿಕೆ ಉಪ್ಪು ಮತ್ತು ಮೆಣಸಿನಕಾಯಿಯೊಂದಿಗೆ ಆಮ್ಲಾ ಜ್ಯೂಸ್ ನಿಮ್ಮ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ . ಅಲ್ಲದೇ ಇದು ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.