ಆರೋಗ್ಯಕ್ಕೆ ಉತ್ತಮವಾದ ಅಲೋವೆರಾ ಸೇವಿಸುವುದರಿಂದ ಇದೆಯಂತೆ ಅಡ್ಡಪರಿಣಾಮಗಳು
ಮಂಗಳವಾರ, 6 ನವೆಂಬರ್ 2018 (08:56 IST)
ಬೆಂಗಳೂರು : ಅಲೋವೆರಾ ಚರ್ಮ ಹಾಗೂ ಆರೋಗ್ಯಕ್ಕೆ ಉತ್ತಮವೆಂದು ಹೇಳುತ್ತಾರೆ. ಆದರೆ ಈ ಅಲೋವೆರಾದಿಂದ ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳಿವೆ. ಅವು ಯಾವುವು ಎಂದು ತಿಳಿಯೋಣ.
* ಅಲೋವೆರಾ ಎಳೆಗಳು ಲೇಟೆಕ್ಸ್ ಅನ್ನು ಹೊಂದಿದ್ದು, ಅದು ಸಸ್ಯದ ಚರ್ಮದ ಕೆಳಗಿನಿಂದ ಬರುತ್ತದೆ. ಈ ಲೇಟೆಕ್ಸ್ ಗೆ ಹಲವಾರು ಅಲರ್ಜಿ ಹೊಂದಿರುವುದರಿಂದ, ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಹೆಚ್ಚು.
* ಅಲೋವೆರಾದಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಯಕೃತ್ತಿನ ನಿರ್ವಿಷೀಕರಣ ಪ್ರಕ್ರಿಯೆಯಲ್ಲಿ ತೊಂದರೆಯನ್ನು ಉಂಟುಮಾಡಿ, ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.
* ಆಲೋವೆರಾ ರಸವು ದೇಹದ ಪೊಟ್ಯಾಸಿಯಂ ತಮಟ್ಟವನ್ನು ಕಡಿಮೆಗೊಳಿಸಿ, ನಿಮ್ಮ ಹೃದಯದ ಬಡಿತವನ್ನು ಏರುಪೇರು ಮಾಡಬಹುದು. ಇದರಿಂದ ಸುಸ್ತು, ದೌರ್ಬಲ್ಯ ಮತ್ತು ಆಯಾಸ ಉಂಟುಮಾಡಬಹುದು.
* ಅಲೋವೆರಾದ ಲಕ್ಸಾಟಿವೆ ಪರಿಣಾಮಗಳು ನಿಮ್ಮ ದೇಹವನ್ನು ನಿರ್ಜಲೀಕರಿಸಬಹುದು. ಹಾಗಾಗಿ, ಗರ್ಭಿಣಿಯರು ಅಲೋವೆರಾವನ್ನು ದೂರವಿರಿಸುವುದು ಸೂಕ್ತ. ಅಲ್ಲದೇ ಗರ್ಭಾವಸ್ಥೆಯಲ್ಲಿ ಅಲೋವೆರಾವನ್ನು ಸೇವಿಸಿದರೆ ಇದು ಮಗುವಿನ ಜನ್ಮ ದೋಷಕ್ಕೆ ಕಾರಣವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.