ಸಿಹಿಯಾದ ಸಬ್ಬಕ್ಕಿ ಲಡ್ಡು

ಶುಕ್ರವಾರ, 26 ಜೂನ್ 2020 (09:08 IST)
ಬೆಂಗಳೂರು : ಸಬ್ಬಕ್ಕಿಯಿಂದ ಪಾಯಸ ಮಾಡುತ್ತಾರೆ. ಅದೇರೀತಿ ಈ ಸಬ್ಬಕ್ಕಿಯಿಂದ ಸಿಹಿಯಾದ ಲಡ್ಡನ್ನು ಕೂಡ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು: ಸಬ್ಬಕ್ಕಿ 1 ಕಪ್, 6 ಟೇಬಲ್ ಚಮಚ ತುಪ್ಪ, ಏಲಕ್ಕಿ ಪುಡಿ 1 ಚಮಚ, ಗೋಡಂಬಿ ಪೀಸ್ 1 ಕಪ್, ½ ಚಮಚ ಜಾಯಿಕಾಯಿ ಪುಡಿ, ಸಕ್ಕರೆ ಪುಡಿ 1 ಕಪ್, ಒಣ ಕೊಬ್ಬರಿ ತುರಿ ¾ ಕಪ್.

ಮಾಡುವ ವಿಧಾನ : ಮೊದಲಿಗೆ ಸಬ್ಬಕ್ಕಿಯನ್ನು ಹುರಿಯಿರಿ. ಬಳಿಕ ಅದನ್ನು ನುಣ್ಣಗೆ ಪುಡಿಮಾಡಿಕೊಳ್ಳಿ.ಇದಕ್ಕೆ ಹುರಿದ ತೆಂಗಿನ ತುರಿಯನ್ನು ಮಿಕ್ಸ್ ಮಾಡಿ. ನಂತರ ಇನ್ನೊಂದು ಪಾತ್ರೆಯಲ್ಲಿ ತುಪ್ಪ ಹಾಕಿ ಗೋಡಂಬಿ, ಸಬ್ಬಕ್ಕಿ ಮಿಶ್ರಣವನ್ನು ಹುರಿಯಿರಿ. ಅದಕ್ಕೆ ಸಕ್ಕರೆ ಪುಡಿ, ಏಲಕ್ಕಿ ಪುಡಿ, ಜಾಯಿಕಾಯಿ ಮಿಕ್ಸ್ ಮಾಡಿ. ಸಕ್ಕರೆ ಕರಗಿದ ಮೇಲೆ 2 ಚಮಚ ತುಪ್ಪ ಹಾಕಿ ಮಿಕ್ಸ್ ಮಾಡಿ. ಬಳಿಕ ಈ ಮಿಶ್ರಣ ತಣ್ಣಗಾದ ಮೇಲೆ ಲಡ್ಡನ್ನು ತಯಾರಿಸಿದರೆ ಸಬ್ಬಕ್ಕಿ ಲಡ್ಡು ರೆಡಿ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ