ಇದನ್ನು ಸೇವಿಸುವುದರಿಂದ ಮಹಿಳೆಯರಲ್ಲಿ ಗರ್ಭದಾರಣೆ ಸಾಧ್ಯತೆ ಹೆಚ್ಚುತ್ತದೆ!
ಶನಿವಾರ, 25 ಮೇ 2019 (07:30 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರು ಬಂಜೆತನದಿಂದ ಬಳಲುವುದು ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳು ಹಲವಿರಬಹುದು. ಆದರೆ ಮಹಿಳೆಯರಲ್ಲಿ ಫಲವಂತಿಕೆ ಹೆಚ್ಚಬೇಕಾದರೆ ಈ ಆಹಾರ ಸೇವಿಸಿದರೆ ಒಳ್ಳೆಯದು.
ಮೊಸರು
ಇದರಲ್ಲಿರುವ ವಿಟಮಿನ್ ಡಿ ಅಂಶ ಮಹಿಳೆಯರ ಋತುಚಕ್ರ ನಿಯಮಿತಗೊಳಿಸುತ್ತದೆ. ಅಲ್ಲದೆ ಇದು ಸೆಕ್ಸ್ ಹಾರ್ಮೋನ್ ಗಳನ್ನು ನಿಯಂತ್ರಿಸುತ್ತದೆ.
ಸೊಪ್ಪು ತರಕಾರಿಗಳು
ಬಸಳೆ, ಪಾಲಕ್ ನಂತಹ ಸೊಪ್ಪು ತರಕಾರಿಗಳಲ್ಲಿ ಕಬ್ಬಿಣದಂಶ ಹೇರಳವಾಗಿದ್ದು, ಇದು ಅಂಡಾಣು ಪ್ರಕ್ರಿಯೆಯನ್ನು ಕ್ರಮವಾಗಿರಿಸುತ್ತದೆ.
ಮೀನು
ಮೀನಿನಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ಅಂಶ ಫಲವಂತಿಕೆ ಹೆಚ್ಚಿಸುತ್ತದೆ.
ನೇರಳೆ ಹಣ್ಣು
ನೇರಳೆ ಹಣ್ಣು, ಚೆರ್ರಿ, ದಾಳಿಂಬೆಯಂತಹ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಅಂಶ ಮಹಿಳೆಯರು ಮತ್ತು ಪುರುಷರಲ್ಲೂ ಫಲವಂತಿಕೆ ಹೆಚ್ಚುವಂತೆ ಮಾಡುತ್ತದೆ.