ವಿವೇಕ್ ಓಬೇರಾಯ್ ಮಾಡಿದ ಎಡವಟ್ಟು ಮಾಜಿ ಪ್ರೇಮಿಗಳಿಗೆ ಎಚ್ಚರಿಕೆಯ ಕರೆಗಂಟೆ
ಒಂದು ಸಂಬಂಧ ಕಳಚಿಕೊಂಡ ಮೇಲೆ ಅದರ ಕಾರಣ ಏನೇ ಇದ್ದರೂ, ಯಾವುದೇ ಕಾರಣಕ್ಕೂ ಹಳೆಯ ಸಂಬಂಧವನ್ನು ಕೆದಕುವ, ನೀರೆರೆಯುವ ಪ್ರಯತ್ನ ಮಾಡಬಾರದು. ಮಾಡಿದರೆ ಈ ರೀತಿಯ ಶಾಸ್ತಿಯಾಗುತ್ತದೆ ಎಂಬುದಕ್ಕೆ ವಿವೇಕ್ ಉದಾಹರಣೆಯಾದರು. ಹಳೆಯ ಗೆಳತಿಯನ್ನು ಯಾವತ್ತೂ ತಮಾಷೆ ಮಾಡಲು ಹೋಗಬಾರದು ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ.