ಈ ಆಹಾರಗಳಿಂದ ನಿಮ್ಮ ಮೆದುಳಿಗೆ ಅಪಾಯವೇ ಜಾಸ್ತಿ!

ಗುರುವಾರ, 15 ಫೆಬ್ರವರಿ 2018 (08:39 IST)
ಬೆಂಗಳೂರು: ಕೆಲವು ಆಹಾರಗಳು ನಮ್ಮ ಮೆದುಳಿನ ಆರೋಗ್ಯಕ್ಕೆ ಹಾನಿ ಉಂಟು ಮಾಡಬಲ್ಲವು. ಅವು ಯಾವುವು ಗೊತ್ತಾ?
 

ಸಂಸ್ಕರಿತ ಆಹಾರ
ಸಕ್ಕರೆಯಂತಹ ಸಂಸ್ಕರಿತ ಆಹಾರ, ಸಂಸ್ಕರಿತ ಹಿಟ್ಟು, ಮುಂತಾದ ಆಹಾರಗಳು ಸುಲಭವಾಗಿ ಜೀರ್ಣವಾಗಬಹುದು. ಆದರೆ ಇದರಿಂದ ರಕ್ತದಲ್ಲಿ ಸಿಹಿ ಅಂಶ ಹೆಚ್ಚಿಸಿ ಇನ್ಸುಲಿನ್ ಮಟ್ಟ ಹೆಚ್ಚು ಉತ್ಪತ್ತಿ ಮಾಡುತ್ತದೆ. ಇದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ.

ಮದ್ಯಪಾನ
ನಿಯಮಿತವಾಗಿ ಮಿತಿ ಮೀರಿ ಮದ್ಯ ಸೇವಿಸುವುದರಿಂದ ಮೆದುಳಿನ ಸಂದೇಶ ವಾಹಕಗಳಾಗಿ ಕೆಲಸ ಮಾಡುವ ನರವ್ಯೂಹದ ಮೇಲೆ ಪರಿಣಾಮ ಬೀರಬಹುದು.

ಸಿಹಿ ಪಾನೀಯಗಳು
ಕೃತಕ ಸಕ್ಕರೆ ಅಂಶವಿರುವ ತಂಪು ಪಾನೀಯಗಳು, ಸೋಡಾದಂತಹ ಆಹಾರ ಪದಾರ್ಥಗಳು ಬೊಜ್ಜು ಬೆಳೆಸುವುದಲ್ಲದೆ, ಮೆದುಳಿಗೆ ಸಂಬಂಧಿಸಿದ ಕೆಲವು ರೋಗಗಳಿಗೆ ಕಾರಣವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ