ಈ ಹಣ್ಣುಗಳನ್ನು ತಿಂತಾ ಇದ್ರೆ ಅದೇನು ಮ್ಯಾಜಿಕ್ ಆಗುತ್ತೆ ಗೊತ್ತಾ?!

ಗುರುವಾರ, 21 ಡಿಸೆಂಬರ್ 2017 (08:29 IST)
ಬೆಂಗಳೂರು: ತೂಕ ಕಳೆದುಕೊಳ್ಳಬೇಕೆಂದು ಸರ್ಕಸ್ ಮಾಡುತ್ತಿದ್ದೀರಾ? ಹಾಗಿದ್ದರೆ ಈ ಕೆಲವು ಹಣ್ಣುಗಳನ್ನು ನಿಯಮಿತವಾಗಿ ಸೇವಿಸುತ್ತಿರಿ. ಅವುಗಳು ಯಾವುವು ನೋಡೋಣ.
 

ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನಲ್ಲಿ 100 ಗ್ರಾಂಗೆ ಕೇವಲ 30 ಗ್ರಾಂಗಳಷ್ಟೇ ಕ್ಯಾಲೊರಿಯಿದೆ. ಇದರಲ್ಲಿ ಅಮಿನೊ ಆಸಿಡ್ ಅಂಶ ಹೆಚ್ಚಿದ್ದು, ಇದು ಕೊಬ್ಬು ಕರಗಿಸಲು ಸಹಕಾರಿ.

ಸೀಬೇಕಾಯಿ
ಸೀಬೇಕಾಯಿಯಲ್ಲಿ ಫೈಬರ್ ಅಂಶ ಹೇರಳವಾಗಿದ್ದು, ಇದು ತೂಕ ಇಳಿಸಲು ಸಹಕಾರಿ. ಇದು ಮೆಟಾಬಾಲಿಕ್ ಅಂಶವನ್ನು ಹೆಚ್ಚಿಸುತ್ತದೆ. ಇದು ತೂಕ ಇಳಿಕೆಗೆ ಸಹಕಾರಿ.

ಕಿತ್ತಳೆ
ಕಿತ್ತಳೆ ಹಣ್ಣಿನಲ್ಲಿ ಕಡಿಮೆ ಕ್ಯಾಲೊರಿಯಿದ್ದು, ವಿಟಮಿನ್ ಸಿ ಅಂಶವೂ ಹೇರಳವಾಗಿದೆ. ತೂಕ ಕಡಿಮೆ ಮಾಡಲು ಇಷ್ಟು ಸಾಕು.

ನೇರಳೆ ಹಣ್ಣು
ನೇರಳೆ ಹಣ್ಣಿನಲ್ಲಿ ಮೆಟಾಬೋಲಿಕ್ ಅಂಶ ಹೆಚ್ಚಿಸುವ ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿದೆ. ಇದು ಕೊಬ್ಬಿನಂಶ ಕರಗಿಸುವುದಲ್ಲದೆ, ಮಧುಮೇಹಿಗಳಿಗೂ ಹೇಳಿ ಮಾಡಿಸಿದ ಹಣ್ಣು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ