ತಲೆಯಲ್ಲಿರುವ ಹೇನು ಹಾಗೂ ಸೀರುಗಳನ್ನು ನಾಶಮಾಡುತ್ತೇ ಈ ಬಾಚಣಿಗೆ

ಸೋಮವಾರ, 10 ಜೂನ್ 2019 (06:58 IST)
ಬೆಂಗಳೂರು : ತಲೆಯಲ್ಲಿ ಹೇನುಗಳಿದ್ದರೆ ತುಂಬಾ ಕಿರಿಕಿರಿ, ಮುಜುಗರವಾಗುತ್ತದೆ. ಅಷ್ಟೇ ಅಲ್ಲದೇ ಈ ಹೇನುಗಳು ಕಚ್ಚಿ  ತಲೆಯಲ್ಲಿ ಗಾಯಗಳು ಕೂಡ ಆಗುತ್ತದೆ. ಇವುಗಳನ್ನು ಹೋಗಲಾಡಿಸಲು ಅನೇಕ ವಿಧದ ಶಾಂಪುಗಳನ್ನು , ಔಷಧಿಗಳನ್ನು ಕಂಡುಹಿಡಿಯಲಾಗಿದೆ. ಅದೇರೀತಿ ಇದೀಗ ಹೇನುಗಳನ್ನು ಸಾಯಿಸಲು ವಿಶೇಷವಾದ ಬಾಚಣಿಗೆಯನ್ನು ಕಂಡುಹಿಡಿಯಲಾಗಿದೆ.




ಹೌದು. ಹೇನುಗಳ ಜೊತೆಗೆ ಅವುಗಳ ಮೊಟ್ಟೆಗಳನ್ನು ಸಾಯಿಸಲು ಜರ್ಮನಿಯ ಫ್ರಾನ್ ಹೂಪರ್ ಒಂದು ವಿಶೇಷವಾದ ಬಾಚಣಿಗೆಯನ್ನು ತಯಾರಿಸಿದ್ದಾರೆ. ಈ ಬಾಚಣಿಗೆಯ ಹಲ್ಲುಗಳು ಎಲೆಕ್ಟ್ರೋಡ್ ಗಳಂತೆ ಕೆಲಸ ಮಾಡುತ್ತಾ ತಲೆಯ ಮೇಲೆ ಬಿಸಿಗಾಳಿಯನ್ನು ಬಿಡುತ್ತದೆ. ಇದಕ್ಕೆ ಪ್ಲಾಸ್ಮಾ ಎಂದು ಕರೆಯುತ್ತಾರೆ. ಇದು ಹೇನುಗಳು ಹಾಗೂ ಸೀರುಗಳನ್ನು ನಾಶಮಾಡುತ್ತದೆ.


 ಈ ಪ್ಲಾಸ್ಮಾ ಶಾಖ ನಮ್ಮ ರೂಮ್ ಟೆಂಪರೇಚರ್ ಗಿಂತ ಕಡಿಮೆ ಇರುತ್ತದೆ. ಇದರಿಂದಾಗಿ ತಲೆ ಕೂದಲಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಈಗಾಗಲೇ ಫ್ರಾನ್ಸ್, ಜರ್ಮನಿ ದೇಶಗಳಲ್ಲಿ ಇದನ್ನು ಬಳಸುತ್ತಿದ್ದು, ಶೀಘ್ರದಲ್ಲಿ ಭಾರತದ ಮಾರ್ಕೆಟ್ ಗೂ ಬರಬಹುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ