ಬೆಂಗಳೂರು : ಕೆಲವರಿಗೆ ಬಿಸಿ ಅಥವಾ ಕೋಲ್ಡ್ ವಸ್ತುಗಳನ್ನು ಬಾಯಿಗೆ ಹಾಕಿದಾಗ ಹಲ್ಲು ಜುಮ್ಮೆನಿಸುತ್ತದೆ. ಹಲ್ಲಿನ ದಂತಕವಚ ಹಾಗೂ ಬೇರುಗಳ ಸಮಸ್ಯೆಯಿಂದ ಈ ರೀತಿ ಸಮಸ್ಯೆ ಎದುರಾಗುತ್ತದೆ. ಇದನ್ನು ಕೆಲವು ಮನೆಮದ್ದಿನಿಂದ ನಿವಾರಿಸಿಕೊಳ್ಳಬಹುದು.
*ಪೇರಳೆ ಎಲೆ ನೋವು ನಿವಾರಕ, ಉರಿಯೂತ ಹಾಗೂ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಪೇರಳೆ ಫ್ಲೇವನಾಯ್ಡ್ ಗಳಲ್ಲಿ ಸಮೃದ್ಧವಾಗಿರುವ ಸಾರಗಳನ್ನು ಬಳಸುವುದರಿಂದ ಹಲ್ಲುನೋವು ಶಮನವಾಗುತ್ತದೆ. ಆದ್ದರಿಂದ ಎರಡು ಮೂರು ಪೇರಳೆ ಎಲೆಗಳನ್ನು ಅಗಿಯುವುದರಿಂದ ಹಲ್ಲಿನ ಸೂಕ್ಷ್ಮತೆ ಮತ್ತು ನೋವು ಕಡಿಮೆಯಾಗುತ್ತದೆ.
*ಬೆಳ್ಳುಳ್ಳಿ ಮ್ಯಾಂಗನೀಸ್ ಮತ್ತು ವಿಟಮಿನ್ ಬಿ6, ವಿಟಮಿನ್ ಸಿ ಮತ್ತು ತಾಮ್ರದ ಉತ್ತಮ ಮೂಲವಾಗಿದೆ. 2 ಬೆಳ್ಳುಳ್ಳಿಯ ಹಾಗೂ 3 ಲವಂಗವನ್ನು ಸೇರಿಸಿ ಅಗೆಯುವುದರಿಂದ ಆಲಿಸಿನ್ ಎಂಬ ಸಂಯುಕ್ತವು ಉತ್ಪಾದನೆಯಾಗುತ್ತದೆ. ಈ ಸಂಯುಕ್ತವು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಸ್ಟ್ರಪ್ಟೋಕೊಕಸ್ ಮ್ಯುಟಾನ್ ಗಳಂತಹ ಮೌಖಿಕ ಕಾಯಿಲೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ.