ರಕ್ತದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ ಈ ನೈಸರ್ಗಿಕವಾದ ಜ್ಯೂಸ್
ಭಾನುವಾರ, 17 ಮಾರ್ಚ್ 2019 (07:06 IST)
ಬೆಂಗಳೂರು : ಮನುಷ್ಯನ ದೇಹಕ್ಕೆ ರಕ್ತ ಅತಿ ಮುಖ್ಯ. ದೇಹದಲ್ಲಿ ರಕ್ತ ಉತ್ಪತ್ತಿ ಚೆನ್ನಾಗಿಯಾದರೆ ಮಾತ್ರ ಆ ಮನುಷ್ಯ ಆರೋಗ್ಯವಾಗಿರುತ್ತಾನೆ. ಆದರೆ ಈ ರಕ್ತದಲ್ಲಿ ಕಲ್ಮಶಗಳು ಸೇರಿಕೊಂಡರೆ ಮನುಷ್ಯನ ಆರೋಗ್ಯ ಕೆಡುತ್ತದೆ. ಹಾಗಾದ್ರೆ ಈ ರಕ್ತದಲ್ಲಿರುವ ಕಲ್ಮಶಗಳನ್ನು ಹೊರಹಾಕಿ ರಕ್ತವನ್ನು ಶುದ್ಧಗೊಳಿಸುವುದು ಹೇಗೆ ಗೊತ್ತಾ?
ಶರೀರದಲ್ಲಿನ ಕಲ್ಮಶ ಹಾಗೂ ಹೆಚ್ಚುವರಿ ಕೊಬ್ಬಿನ ಅಂಶಗಳ ನಿವಾರಣೆಗೆ ಒಂದು ನೈಸರ್ಗಿಕ ಜ್ಯೂಸ್ ನಿಮಗೆ ಸಹಾಯ ಮಾಡಬಲ್ಲದು. ಈ ಜ್ಯೂಸ್ ನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು. ಇದನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು.
ನಿಮ್ಮ ಮನೆಯಲ್ಲಿ ಸಿಗುವ ಶುಂಠಿ, ನಿಂಬೆ ಹಣ್ಣು ಹಾಗೂ ದಾಲ್ಚಿನ್ನಿಪುಡಿ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಸೇವಿಸಿದರೆ ರಕ್ತದಲ್ಲಿರುವ ಕಲ್ಮಶಗಳು ಹೊರಗೆಹೋಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.