ಈ ಆರೋಗ್ಯ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಮಾವಿನ ಹಣ್ಣನ್ನು ಸೇವಿಸಬೇಡಿ

ಗುರುವಾರ, 25 ಅಕ್ಟೋಬರ್ 2018 (11:38 IST)
ಬೆಂಗಳೂರು : ಮಾವಿನ ಹಣ್ಣನ್ನು ಎಲ್ಲರೂ ಇಷ್ಟಪಡುತ್ತಾರೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದರೆ ಕೆಲವೊಂದು ಆರೋಗ್ಯ ಸಮಸ್ಯೆ ಇರುವವರು ಈ ಹಣ್ಣನ್ನು ಸೇವಿಸಬಾರದು.


ಮಧುಮೇಹ : ಯಾರಿಗೆ ಮಧುಮೇಹ ರೋಗವಿರುತ್ತದೆಯೋ ಅವರು ಮಾವಿನ ಹಣ್ಣನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ. ಮಾವಿನ ಹಣ್ಣು ಜಾಸ್ತಿ ಸಿಹಿಯಾಗಿರುವುದರಿಂದ ಮಾವಿನ ಹಣ್ಣು ಸೇವನೆ ಮಾಡುವುದರಿಂದ ದೇಹದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ.


ಹೊಟ್ಟೆ ಸಮಸ್ಯೆ : ಮಾವಿನ ಹಣ್ಣನ್ನು ಜಾಸ್ತಿ ಸೇವನೆ ಮಾಡುವುದರಿಂದ ಫೈಬರ್ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಬೇಧಿ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗೆ ಹೊಟ್ಟೆಯಲ್ಲಿ ಬೇರೆ ಸಮಸ್ಯೆ ಇರುವವರು ಮಾವಿನ ಹಣ್ಣಿನಿಂದ ದೂರವಿರುವುದು ಬೆಸ್ಟ್.


ಸ್ಥೂಲಕಾಯ : ತೂಕ ಜಾಸ್ತಿಯಿರುವವರು ಹಾಗೂ ತೂಕ ಇಳಿಸಿಕೊಳ್ಳಲು ಬಯಸುವವರು ಮಾವಿನ ಹಣ್ಣು ಸೇವನೆ ಮಾಡಬೇಡಿ. ಇದ್ರಲ್ಲಿ ಕ್ಯಾಲೋರಿ ಹಾಗೂ ಸಕ್ಕರೆ ಪ್ರಮಾಣ ಹೆಚ್ಚಿರುವುದರಿಂದ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ.


ಅಲರ್ಜಿ : ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಮಾವಿನ ಹಣ್ಣು ಸೇವನೆ ಮಾಡಬಾರದು.


ಹೃದಯ ಸಮಸ್ಯೆ : ಮಾವಿನಲ್ಲಿ ಪೊಟ್ಯಾಸಿಯಮ್ ಪ್ರಮಾಣ ಹೆಚ್ಚಿರುತ್ತದೆ. ಇದ್ರ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಜಾಸ್ತಿಯಾಗಿ ಹೃದಯ ರೋಗಿಗಳ ಸಮಸ್ಯೆ ಹೆಚ್ಚಾಗುತ್ತದೆ.


ಅಸ್ತಮಾ : ಅಸ್ತಮಾ ರೋಗಿಗಳು ಕೂಡ ಮಾವಿನ ಹಣ್ಣು ಸೇವನೆ ಮಾಡಬೇಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ