ಕಣ್ಣುಗಳಿಗೆ ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಈ ಸಲಹೆಗಳನ್ನು ಪಾಲಿಸಿ..

ಮಂಗಳವಾರ, 19 ಜೂನ್ 2018 (15:55 IST)
ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಸೋಂಕುಗಳನ್ನು ತಡೆಗಟ್ಟಲು ತಮ್ಮ ಲೆನ್ಸ್‌ಗಳನ್ನು ಸರಿಯಾಗಿ ನೋಡಿಕೊಳ್ಳಬೇಕು. ಲೆನ್ಸ್‌ಗಳನ್ನು ಕಣ್ಣಿನ ಒಳಗೆ ಹಾಕಿಕೊಳ್ಳುವುದರಿಂದ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷಜೀವಿಗಳು ಕಣ್ಣನ್ನು ಸೇರಿ ಸಮಸ್ಯೆಯನ್ನು ಉಂಟುಮಾಡುವ ಸಾಧ್ಯತೆಗಳಿವೆ.

ಅದಲ್ಲದೇ ಲೆನ್ಸ್‌ಗಳನ್ನು ಬಳಸುವಾಗ ತೋರುವ ನಿರ್ಲಕ್ಷತನಗಳೂ ಸಹ ಕೆಲವು ಸಮಸ್ಯೆಗಳನ್ನು ತಂದೊಡ್ಡಬಹುದಾಗಿದೆ. ಹಾಗಾಗಿ ನೀವು ಕಣ್ಣುಗಳಿಗೆ ಲೆನ್ಸ್ ಧರಿಸುವವರಾಗಿದ್ದರೆ ಅನುಸರಿಸಬೇಕಾದ ಕೆಲವು ಮುಖ್ಯ ನಿಯಮಗಳು ಇಲ್ಲಿವೆ.
 
*ನಿಮ್ಮ ಕೈಗಳನ್ನು ತೊಳೆದುಕೊಳ್ಳಿ: ಕಾಂಟ್ಯಾಕ್ಟ್ ಲೆನ್ಸ್ ಬಳಸುವಾಗ ಅದರ ಮೂಲಕ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ನಿಮ್ಮ ಕಣ್ಣಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ನೀವು ಕಾಂಟ್ಯಾಕ್ಟ್ ಲೆನ್ಸ್ ಧರಿಸುವಾಗ ಮತ್ತು ತೆಗೆಯುವಾಗ ಸೋಪನ್ನು ಬಳಸಿ ನಿಮ್ಮ ಕೈಗಳನ್ನು ತೊಳೆದುಕೊಳ್ಳಬೇಕು. ಲೆನ್ಸ್‌ಗಳನ್ನೂ ಸಹ ಶುಭ್ರವಾಗಿ ತೊಳೆದು ಗಾಳಿಯಿಂದ ಒಣಗಿಸಬೇಕು.
 
*ಲೆನ್ಸ್‌ಗಳನ್ನು ಸೂಚನೆಯ ಪ್ರಕಾರ ಬಳಸಿ: ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ಮಲಗುವುದನ್ನು ಬಿಡಿ. ನಿಮ್ಮ ಕಣ್ಣಿನ ವೈದ್ಯರು ನೀಡಿರುವ ಸೂಚನೆಗಳ ಪ್ರಕಾರ ಅವುಗಳನ್ನು ಧರಿಸಿ ಮತ್ತು ಬಳಸಿ. ಲೆನ್ಸ್‌ಗಳನ್ನು ಸ್ವಚ್ಛಗೊಳಿಸಲು ಅವಧಿ ಮೀರಿದ ಸೊಲ್ಯೂಶನ್‌ಗಳನ್ನು ಬಳಸಬೇಡಿ ಮತ್ತು ನಿಗದಿತ ಸಮಯಗಳಿಗೆ ಅವುಗಳನ್ನು ಬದಲಿಸಲು ಮರೆಯಬೇಡಿ. ತೊಳೆಯಲು ಮತ್ತು ಸಲೈನ್ ಸೊಲ್ಯೂಶನ್‌ನಲ್ಲಿ ಶೇಖರಿಸಲು ನಲ್ಲಿ ನೀರನ್ನು ಬಳಸಬೇಡಿ. ಅದಲ್ಲದೇ ನಿಮ್ಮ ಲಾಲಾರಸದಿಂದ ಅವುಗಳನ್ನು ತೇವಗೊಳಿಸಬೇಡಿ. ಅದು ಲಕ್ಷಾಂತರ ಬ್ಯಾಕ್ಟೀರಿಯಾಗಳನ್ನು ನಿಮ್ಮ ಲೆನ್ಸ್‌ಗೆ ವರ್ಗಾಯಿಸುತ್ತದೆ ಮತ್ತು ನಿಮ್ಮ ಕಣ್ಣುಗಳ ಸೋಂಕಿಗೆ ಕಾರಣವಾಗುತ್ತದೆ.
 
*ಧೂಮಪಾನವನ್ನು ಬಿಡಿ: ಧೂಮಪಾನವನ್ನು ಬಿಡಿವುದು ಎಲ್ಲಾ ದೃಷ್ಟಿಯಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ನೀವು ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಿದ್ದರೆ ಖಂಡಿತವಾಗಿ ಬಿಟ್ಟುಬಿಡಬೇಕು. ಧೂಮಪಾನ ಮಾಡದಿರುವವರಿಗೆ ಹೋಲಿಸಿದರೆ ಧೂಮಪಾನಿಗಳು ಕಣ್ಣಿನ ಸಮಸ್ಯೆಗಳಿಗೆ ಹೆಚ್ಚು ದುರ್ಬಲವಾಗಿದ್ದಾರೆ.
 
*ಅಲಂಕಾರಿಕ ಲೆನ್ಸ್ ಬಳಸುವುದನ್ನು ತಪ್ಪಿಸಿ: ಮಾರುಕಟ್ಟೆಯಲ್ಲಿ ದೊರೆಯುವ ಬಣ್ಣ ಬಣ್ಣದ ಲೆನ್ಸ್‌ಗಳಿಗೆ ನೀವು ಆಕರ್ಷಿತರಾಗುವುದು ಸಹಜ, ಆದರೆ ಅಲಂಕಾರಿಕ ಅಂಗಡಿಗಳಲ್ಲಿ ಮಾರಾಟ ಮಾಡುವ ಬಣ್ಣ ಬಣ್ಣದ ಲೆನ್ಸ್ ಬಳಸುವುದನ್ನು ಬಿಡಿ. ಅವುಗಳು ನಿಮ್ಮ ದೃಷ್ಟಿ ಮತ್ತು ಕಣ್ಣುಗಳಿಗೆ ಹಾನಿಯನ್ನು ಉಂಟುಮಾಡಬಹುದಾಗಿದೆ.
 
*ಯಾವುದೇ ಕಾರಣಕ್ಕೂ ನಿಮ್ಮ ಲೆನ್ಸ್‌ಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಡಿ. ಲೆನ್ಸ್‌ಗಳನ್ನು ಹಂಚಿಕೊಳ್ಳುವುದು ಎಂದರೆ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣುಜೀವಿಗಳನ್ನು ಹಂಚಿಕೊಂಡಂತೆಯೇ ಆಗಿದೆ. ಅದಲ್ಲದೇ ಬೇರೆಯವರ ಲೆನ್ಸ್‌ನ ಗಾತ್ರವು ನಿಮಗೆ ಸರಿಹೊಂದದೇ ಸಮಸ್ಯೆಗಳು ಉಂಟಾಗಬಹುದಾಗಿದೆ.
 
ನಿಮ್ಮ ದೃಷ್ಟಿಯಲ್ಲಿನ ಅಸ್ವಸ್ಥತೆಯ ಸಣ್ಣದೊಂದು ಚಿನ್ಹೆಗಳನ್ನೂ ನಿರ್ಲಕ್ಷಿಸಬೇಡಿ. ಕಣ್ಣಿನ ವೈದ್ಯರಲ್ಲಿ ಭೇಟಿ ನೀಡಿ ಪ್ರತಿ ವರ್ಷವೂ ಸಂಪೂರ್ಣ ಕಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ಈ ಹಂತಗಳು ತುಂಬಾ ಸಣ್ಣದಾಗಿ ಕಾಣಿಸಿದರೂ ನಿಮ್ಮ ಕಣ್ಣುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
 
*ಅವುಗಳನ್ನು ಸರಿಯಾಗಿ ಸಂಗ್ರಹಿಸಿ: ಲೆನ್ಸ್‌ಗಳನ್ನು ಶೇಖರಿಸಿಡಲು ಅದರೊಂದಿಗೆ ನೀಡಿದ ಸ್ಟೆರೈಲ್ ದ್ರಾವಣವನ್ನು ಯಾವಾಗಲೂ ಬಳಸಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ