
ಒಂದು ಪಾತ್ರೆಯಲ್ಲಿ 2 ಚಮಚ ಲಿಂಬೆರಸ ಹಾಕಿ ಅದಕ್ಕೆ 3 ಹಣ್ಣಾದ ಟೊಮೆಟೊದ ತಿರುಳನ್ನು ಹಾಕಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ. ಇದನ್ನು ಕೈಗಳ ಸಹಾಯದಿಂದ ತಲೆಬುರುಡೆಗೆ ಹಚ್ಚಿಕೊಳ್ಳಿ. 30ನಿಮಿಷ ಕಾಲ ಹಾಗೆ ಬಿಟ್ಟ ಬಳಿಕ ತಣ್ಣೀರಿನಿಂದ ತೊಳೆಯಿರಿ. ಕೂದಲು ತೊಳೆದ ಬಳಿಕ ಒಣಗಿಸಿ. ಹೀಗೆ ಉತ್ತಮ ಫಲಿತಾಂಶಕ್ಕಾಗಿ ಇದನ್ನ ವಾರದಲ್ಲಿ ಎರಡು ಸಲ ಬಳಸಿ.
ಇದರಿಂದ ಕೂದಲು ರೇಷ್ಮೆಯಂತೆ ಹೊಳೆಯುವುದು, ಕೂದಲು ಉದುರುವಿಕೆ, ತಲೆಬುರುಡೆಯಲ್ಲಿ ತುರಿಕೆ ಸಮಸ್ಯೆ, ತಲೆಹೊಟ್ಟು ಕೂದಲಿನ ವಾಸನೆ ಸಮಸ್ಯೆ ನಿವಾರಣೆಯಾಗುವುದು.

