ತೂಕ ಇಳಿಸಲು ಸರಳ ಟಿಪ್ಸ್‍ಗಳು ಟ್ರೈ ಮಾಡಿ

ಮಂಗಳವಾರ, 2 ನವೆಂಬರ್ 2021 (07:56 IST)
ಕಾಲಕಾಲಕ್ಕೆ ಆಹಾರವನ್ನು ಸೇವನೆ ಮಾಡಿಕೊಂಡು ದೇಹಕ್ಕೆ ಉತ್ತಮ ವ್ಯಾಯಾಮವನ್ನು ಒದಗಿಸಿ ಆಗಾಗ ಆರೋಗ್ಯವನ್ನು ಪರೀಕ್ಷೆ ಮಾಡಿಸಿಕೊಂಡು ಮುಂದುವರೆದರೆ, ಬಹುತೇಕ ಎಲ್ಲರೂ ಆರೋಗ್ಯ ಕೂಡ ಅತ್ಯುತ್ತಮ ದೈಹಿಕ ತೂಕದೊಂದಿಗೆ ಚೆನ್ನಾಗಿ ಇರಲಿದೆ.
•ನೀವು ಸೇವನೆ ಮಾಡುವ ಪ್ರತಿಯೊಂದು ಆಹಾರ ಪದಾರ್ಥ ಸಂಪೂರ್ಣ ತರಕಾರಿಯಿಂದ ತಯಾರು ಮಾಡಿದೆ ಎಂಬುದರ ಬಗ್ಗೆ ನಿಮಗೆ ಖಾತ್ರಿ ಇರಲಿ
•ರೀಫೈನ್ ಮಾಡಿದ ಅಥವಾ ಸಂಸ್ಕರಣೆ ಮಾಡಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡಲೇಬೇಡಿ.
•ಈರುಳ್ಳಿ-ಬೆಳ್ಳುಳ್ಳಿ ಬಿಟ್ಟು ಬೇರೆ ಯಾವುದೇ ತರಕಾರಿಗಳ ಸಿಪ್ಪೆಯನ್ನು ತೆಗೆಯಬೇಡಿ.
•ಸಾವಯವ ಅಡುಗೆ ಉತ್ಪನ್ನಗಳನ್ನು ಸಾಧ್ಯವಾದಷ್ಟು ನಿಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಬಳಕೆ ಮಾಡಿ.
•ನಿಮ್ಮ ಆಹಾರ ಸೇವನೆ ಮಾಡುವ ಪ್ರಕ್ರಿಯೆ ಪ್ರತಿದಿನ ಹೀಗಿರಲಿ
•ಬೆಳಗಿನ ಸಮಯದಲ್ಲಿ ಬೆಡ್ ಕಾಫಿ ಕುಡಿಯುವ ಬದಲು ಸಂಪೂರ್ಣ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವನೆ ಮಾಡಿ ಆದರೆ ಹಣ್ಣಿನ ರಸ ಸೇವಿಸಬೇಡಿ.
•ಇನ್ನು ಬೆಳಗಿನ ಉಪಹಾರದ ಸಂದರ್ಭದಲ್ಲಿ ಇಡ್ಲಿ ಸಾಂಬಾರ್, ಪರೋಟ, ಅವಲಕ್ಕಿ, ತರಕಾರಿ ಪಲ್ಯ, ಸೋಯಾ ಹಾಲು, ತರಕಾರಿ ಸಲಾಡ್ ಇತ್ಯಾದಿಗಳನ್ನು ಸೇವನೆ ಮಾಡಿ.
•ಮಧ್ಯಾಹ್ನದ ಊಟದ ಸಮಯಕ್ಕೆ ರೋಟಿ, ದಾಲ್, ಸಬ್ಜಿ ಸೇವನೆ ಮಾಡಬಹುದು.
•ಸಂಜೆಯ ಸ್ನ್ಯಾಕ್ಸ್ ಸಂದರ್ಭದಲ್ಲಿ, ಮೊಳಕೆ ಕಟ್ಟಿದ ಕಾಳುಗಳು, ಹಣ್ಣುಗಳನ್ನು ಸೇವನೆ ಮಾಡಿ.
•ರಾತ್ರಿಯ ಊಟಕ್ಕೆ ರೋಟಿ ಅಥವಾ ಅನ್ನ, ದಾಲ್, ಸಬ್ಜಿ ಸೇವನೆ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ