ಆರೋಗ್ಯಕರ ಆಹಾರಗಳು ಹೆಚ್ಚು ಸೇವನೆ ಮಾಡುವುದು ಸಹ ಹಾನಿಕಾರಕ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಟ್ಸ್ಗಳು.
ಹಾಗಾದ್ರೆ ಅತಿಯಾಗಿ ನಟ್ಸ್ಗಳನ್ನು ತಿನ್ನುವುದರಿಂದ ಏನಾಗುತ್ತದೆ ಎಂಬುದು ಇಲ್ಲಿದೆ.
ಪೋಷಕಾಂಶದಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುತ್ತೇವೆ. ನೀವು ಯಾವ ರೀತಿಯ ಆಹಾರವನ್ನು ತೆಗೆದುಕೊಂಡರೂ ಏನು, ಯಾವಾಗ ಮತ್ತು ಹೇಗೆ ತಿನ್ನಬೇಕು ಎಂಬುದು ಮುಖ್ಯ. ಆಗ ಮಾತ್ರ ನಮ್ಮ ದೇಹಕ್ಕೆ ಅಗತ್ಯವಿರುವ ಆರೋಗ್ಯಕರ ಆಹಾರವನ್ನು ನಾವು ಸರಿಯಾಗಿ ಸೇವಿಸಬಹುದು.
ಏನನ್ನು ತಿಳಿದುಕೊಳ್ಳಬೇಕು ಎಂದುಕೊಂಡರೂ ತಕ್ಷಣ ವೆಬ್ ಸೈಟ್ ನಲ್ಲಿ ಹುಡುಕುವುದು ನಮ್ಮಲ್ಲಿ ಹಲವರ ಅಭ್ಯಾಸ. ವೆಬ್‌ಸೈಟ್‌ನಲ್ಲಿರುವ ಯಾವುದೇ ಸುದ್ದಿಯನ್ನು ಪರಿಶೀಲಿಸದೆಯೇ ನಾವು ನಂಬುತ್ತೇವೆ. ಉದಾಹರಣೆಗೆ, ಆಹಾರವನ್ನು ಹುಡುಕುವಾಗ, ನಾವು ಆರೋಗ್ಯಕರ ಆಹಾರಗಳನ್ನು ಹುಡುಕುತ್ತೇವೆ, ಆದರೆ ಯಾವುದೇ ವಯಸ್ಸಿನವರು ಎಷ್ಟು ತೆಗೆದುಕೊಳ್ಳಬಹುದು ಎಂಬುದನ್ನು ಪರಿಶೀಲಿಸುವುದಿಲ್ಲ. ಆದ್ದರಿಂದಲೇ ನಮ್ಮ ದೇಹಕ್ಕೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ತಿಳಿಯದೆ ತಿನ್ನುತ್ತಿದ್ದೇವೆ.