ಅರಿಶಿಣದ ನೀರು ಕುಡಿಯಿರಿ ಆರೋಗ್ಯವಾಗಿರಿ

ಬುಧವಾರ, 21 ಮೇ 2014 (15:42 IST)
ಅರಿಶಿಣ ಉತ್ತಮ ಔಷಧೀಯ ಗುಣ ಹೊಂದಿದೆ . ವಿದೇಶದಲ್ಲಿ ಕೂಡ ಅರಿಶಿಣದ ಬಗ್ಗೆ ಸಂಶೋಧನೆ ನಡೆದಿದೆ. ಇದರಲ್ಲಿ ಕರಕ್ಯೂಮಿನ್ ಹೆಸರಿನ ಒಂದು ರಸಾಯನಿಕ ವಸ್ತು ಇದೆ . ಈ ರಸಾಯನಿಕ ಸಾಕಷ್ಟು ರೋಗಗಳಿಗೆ ಔಷಧಿ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ ಅಡುಗೆಯಲ್ಲಿ ಅರಿಶಿಣ ಬಳಸುವುದು ಸಾಮಾನ್ಯವಾಗಿದೆ. 
 
ಅರಶಿಣದ ನೀರಿನ  ಮಹತ್ವ
 
ಅರ್ಧ ಚಮಚ ಅರಿಶಿಣದ ಪುಡಿ ನೀರಿನಲ್ಲಿ ಬೆರೆಸಿ ಪ್ರತಿ ನಿತ್ಯ ಎರಡು ಬಾರಿ ಕುಡಿಯಿರಿ. ಭಾರತೀಯ ಆಯುರ್ವೇದದ ಪ್ರಕಾರ ಅರಿಶಿಣ ಎಲ್ಲಕ್ಕಿಂತ ಉತ್ತಮ ಟಾನಿಕ್‌‌ ಆಗಿದೆ. ಅರಿಶಿಣ ಆದಿವಾಸಿಗಳ ಪರಂಪರಾಗತ ಟಾನಿಕ್‌ ಆಗಿದೆ, ಈ ಮೂಲಕ ಈಡೀ ವಿಶ್ವದ ಎಲ್ಲಕ್ಕಿಂತ ಉತ್ತಮ ಟಾನಿಕ್‌ ಇದಾಗಿದೆ. ಹೃದಯ , ಲೀವರ್‌ , ಶ್ವಾಸಕೋಶಕ್ಕಾಗಿ  ಅರಿಶಿಣಕ್ಕಿಂತ ಉತ್ತಮ ಟಾನಿಕ್‌ ಮತ್ತೊಂದಿಲ್ಲ. ಪ್ರತಿನಿತ್ಯ ಅರಿಶಿಣ ಕುಡಿಯಿರಿ, ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ. 

ವೆಬ್ದುನಿಯಾವನ್ನು ಓದಿ