ಬೆಂಗಳೂರು : ಸುಂದರವಾದ, ಮೊಡವೆ ಮುಕ್ತ ತ್ವಚೆಯನ್ನು ಪಡೆಯುವುದು ಎಲ್ಲಾ ಹೆಣ‍್ಣುಮಕ್ಕಳ ಆಸೆಯಾಗಿರುತ್ತದೆ. ಆದರೆ ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲಮಿಕಲ್ ಯುಕ್ತ ಕ್ರೀಂಗಳನ್ನು ಬಳಸಿ ಮುಖವನ್ನು ಹಾಳುಮಾಡಿಕೊಳ್ಳುವ ಬದಲು ಈ ಹಸಿರು ಸಸ್ಯಗಳನ್ನು ಬಳಸಿ ನಿಮ್ಮಿ ತ್ವಚೆಯನ್ನು ಸುಂದರವಾಗಿಸಿಕೊಳ್ಳಿ.
*ಬೇವು : ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಮೊಡವೆಗಳನ್ನು ನಿವಾರಿಸುತ್ತದೆ. ಹಾಗಾಗಿ ಬೇವಿನ ಎಲೆಗಳನ್ನು ರುಬ್ಬಿ ಮುಖಕ್ಕೆ ಹಚ್ಚಿದರೆ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.
*ತುಳಸಿ : ಇದು ಬ್ಯಾಕ್ಟೀರಿಯಾ ವಿರೊಧಿ ಮತ್ತು ಆ್ಯಂಟಿ ಫಂಗಸ್ ಗುಣಗಳನ್ನು ಹೊಂದಿದೆ. ಹಾಗಾಗಿ ತುಳಸಿ ಎಲೆಯ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿದರೆ ಮೊಡವೆಗಳು ನಿವಾರಣೆಯಾಗುತ್ತವೆ.
*ಅಲೋವೆರಾ ಜೆಲ್ : ಇದು ಚರ್ಮದ ಶುಷ್ಕತೆ, ಮಂದತೆ, ಕಲೆಗಳನ್ನು ತೆಗೆದುಹಾಕುತ್ತದೆ. ಹಾಗಾಗಿ ಅಲೋವೆರಾ ಗಿಡದ ಜೆಲ್ ಅನ್ನು ತೆಗೆದು ಮುಖಕ್ಕೆ ಹಚ್ಚಿ.
*ಪುದೀನಾ : ಇದು ಮೊಡವೆಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಹಾಗಾಗಿ ಪುದೀನಾ ಪೇಸ್ಟ್ ಅನ್ನು ಮೊಡವೆಗಳ ಮೇಲೆ ಹಚ್ಚಿದರೆ ಮೊಡವೆ ನಿವಾರಣೆಯಾಗುತ್ತದೆ.