ದೇಹದಲ್ಲಿ ಸಂಗ್ರಹವಾದ ಲೋಳೆಗಳು ಹೊರಹೋಗಲು ಈ ಮನೆಮದ್ದನ್ನು ಬಳಸಿ
ಶನಿವಾರ, 15 ಆಗಸ್ಟ್ 2020 (07:59 IST)
ಬೆಂಗಳೂರು : ದೇಹದಲ್ಲಿ ಅತಿಯಾದ ಲೋಳೆ ಅಂಶವಿದ್ದಾಗ ವೈರಸ್ ಗಳು, ಬ್ಯಾಕ್ಟೀರಿಯಾಗಳು ಸಂತಾನೋತ್ಪತ್ತಿ ಮಾಡುತ್ತದೆ. ಇದರಿಂದ ಶೀತ, ಕಫ, ಕೆಮ್ಮು ಉಂಟಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.
ಮೆಂತ್ಯ ಬೀಜಗಳು ದೇಹದಲ್ಲಿನ ಅತಿಯಾದ ಲೋಳೆಯನ್ನು ಹೊರಹಾಕುತ್ತದೆ. 1 ಚಮಚ ಮೆಂತ್ಯ ಕಾಳನ್ನು 5 ನಿಮಿಷ ನೀರಿನಲ್ಲಿ ಕುದಿಸಿ. ಈ ಚಹಾವನ್ನು ಸಿಪ್ ಸಿಪ್ ಆಗಿ ಕುಡಿಯಬೇಕು. ದಿನಕ್ಕೆ 2 ಕಪ್ ಕುಡಿಯಬೇಕು. ಇದರಿಂದ ದೇಹದಲ್ಲಿ ಸಂಗ್ರಹವಾದ ಲೋಳೆಗಳು ಒಡೆದು ದೇಹದಿಂದ ಹೊರಹಾಕಲ್ಪಡುತ್ತದೆ.