ಕಾಲು ಪಾದಗಳ ತುರಿಕೆ ನಿವಾರಣೆಗೆ ಈ ಮನೆಮದ್ದನ್ನು ಬಳಸಿ

ಮಂಗಳವಾರ, 2 ಜುಲೈ 2019 (10:15 IST)
ಬೆಂಗಳೂರು : ಕಾಲಿನ ಪಾದ ತೇವಾಂಶದಿದ ಕೂಡಿದಾಗ ಅಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯುತ್ತವೆ. ಇದರಿಂದ ಕಾಲಿನಲ್ಲಿ ತುರಿಕೆ ಪ್ರಾರಂಭವಾಗುತ್ತದೆ. ಈ ತುರಿಕೆ ನಿವಾರಣೆಗೆ ಇಲ್ಲಿದೆ ಮನೆಮದ್ದು.



* ಬಿಸಿ ನೀರಿಗೆ ಉಪ್ಪು ಹಾಕಿ 20 ನಿಮಿಷ ಕಾಲನ್ನು ನೀರಿನಲ್ಲಿ ಇಡಿ. ನಂತರ, ತಣ್ಣೀರಿನಿಂದ ತೊಳೆದು, ಒಣಗಿರುವ ಟವಲ್‍ ನಲ್ಲಿ ನೀರು ಉಳಿಯದಂತೆ ಒರೆಸಿ. ಇದರಿಂದ ನಿಮ್ಮ ಪಾದಕ್ಕೆ ಹಗುರವೆನಿಸುತ್ತದೆ. ವಾರದಲ್ಲಿ 3-4 ಬಾರಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

 

* ಒಂದು ಚಮಚ ವಿನಿಗರ್ ಅನ್ನು ನೀರಿಗೆ ಹಾಕಿ. ಕಾಲುಗಳನ್ನು 20 ನಿಮಿಷ ಇಟ್ಟುಕೊಂಡರೆ ಕಾಲುಗಳ ಉರಿಯೂತ ಕಡಿಮೆ ಆಗುತ್ತದೆ. ವಿನಿಗರ್ ‍ನಲ್ಲಿ ಆಂಟಿಸೆಪ್ಟಿಕ್ ಅಂಶ ನೋವನ್ನು ನಿವಾರಣೆ ಮಾಡುತ್ತದೆ.

 

*ಮೊಸರನ್ನು ತುರಿಕೆ ಕಂಡುಬರುವ ಜಾಗಕ್ಕೆ ಹಚ್ಚಿ. ಇದರಿಂದ ತುರಿಕೆಗೆ ಕಾರಣವಾದ ಶಿಲೀಂಧ್ರಗಳನ್ನು ಕಡಿಮೆ ಮಾಡುತ್ತದೆ.

 

* ಬೆಳ್ಳುಳ್ಳಿಯನ್ನು 2-3 ಚಮಚ ಆಲೀವ್ ಆಯಿಲ್ ಜೊತೆ ಮಿಕ್ಸ್‍ ಮಾಡಿ. ತುರಿಕೆ ಇರುವ ಜಾಗಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತೊಳೆಯಿರಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ