ಬೆಂಗಳೂರು : ಬೇಸಿಗೆಯಲ್ಲಿ ಅತಿಯಾದ ಬೆವರಿನಿಂದಾಗಿ ನೆತ್ತಿಯಲ್ಲಿ ಸೋಂಕು ಉಂಟಾಗಿ ತುರಿಕೆ ಕಂಡುಬರುತ್ತದೆ. ಇದು ತಲೆಹೊಟ್ಟಿಗೆ ಕಾರಣವಾಗುತ್ತದೆ. ಈ ಸೋಂಕನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
*ಬೇವು : ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿರುವುದರಿಂದ ಇದು ಸೋಂಕನ್ನು ನಿವಾರಿಸುತ್ತದೆ. ಹಾಗಾಗಿ ಬೇವಿನ ಎಲೆಗಳಿಂದ ಪೇಸ್ಟ್ ತಯಾರಿಸಿ ಅದಕ್ಕೆ ನಿಂಬೆ ರಸ ಮತ್ತು ಅರಶಿನ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ವಾಶ್ ಮಾಡಿ.
*ಅಲೋವೆರಾ ಜೆಲ್ : ಇದು ಸೋಂಕನ್ನು ತಡೆಯಲು ಸಹಕಾರಿ. ಇದನ್ನು ಕೂದಲಿಗೆ ಹಚ್ಚುವುದರಿಂದ ಕಿರಿಕಿರಿ, ತುರಿಕೆ, ದದ್ದುಗಳು ನಿವಾರಣೆಯಾಗುತ್ತದೆ. ಹಾಗಾಗಿ ಕೂದಲಿಗೆ ಅಲೋವೆರಾ ಜೆಲ್ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ.