ಬೆಂಗಳೂರು : ಸಾಮಾನ್ಯವಾಗಿ ಮಚ್ಚೆಗಳು ಎಲ್ಲರ ದೇಹದಲ್ಲಿ ಇರುತ್ತದೆ. ಆದರೆ ಮುಖದಲ್ಲಿರುವ ಕೆಲವು ಮಚ್ಚೆಗಳು ಮುಖದ ಅಂದವನ್ನು ಕೆಡಿಸುತ್ತದೆ. ಈ ಮಚ್ಚೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
ಅನಾನಸ್ ಹಣ್ಣಿನ ರಸದಲ್ಲಿರುವ ಕಿಣ್ವಗಳು ಮತ್ತು ಸಿಟ್ರಿಕ್ ಆಮ್ಲವು ಮಚ್ಚೆಗಳನ್ನು ಉಂಟುಮಾಡುವ ವರ್ಣದ್ರವ್ಯವನ್ನು ತೆಗೆದುಹಾಕಲು ಸಹಕರಿಸುತ್ತದೆ. ಆದಕಾರಣ ಅನಾನಸ್ ರಸವನ್ನು ಹತ್ತಿಯಲ್ಲಿ ಅದ್ದಿ ಮಚ್ಚೆಗಳ ಮೇಲೆ ಇಟ್ಟು ಬ್ಯಾಂಡೇಜ್ ಹಾಕಿ 1 ಗಂಟೆಗಳ ಬಳಿಕ ನೀರಿನಿಂದ ವಾಶ್ ಮಾಡಿದರೆ ಮಚ್ಚೆಗಳು ನಿವಾರಣೆಯಾಗುತ್ತದೆ.