ಉಸಿರಾಡಲು ತೊಂದರೆ ಮಾಡುವ ಶ್ವಾಸಕೋಶದ ಲೋಳೆ ಅಂಶವನ್ನು ಕರಗಿಸಲು ಈ ಮನೆಮದ್ದು ಬಳಸಿ

ಸೋಮವಾರ, 15 ಜುಲೈ 2019 (09:52 IST)
ಬೆಂಗಳೂರು : ನಾವು ಉಸಿರಾಡುವ ಗಾಳಿಯಲ್ಲಿ ಬ್ಯಾಕ್ಟೀರಿಯಾಗಳಿರುತ್ತವೆ. ಇವು ನಮ್ಮ ಶ್ವಾಸಕೋಶಕ್ಕೆ ಸೇರಿದರೆ ಅಲ್ಲಿ ಲೋಳೆ ಅಂಶವನ್ನು ಬಿಡುಗಡೆ ಮಾಡಿ ನಮ್ಮ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತವೆ. ಒಂದು ವೇಳೆ ಈ ಲೋಳೆ ಅಂಶ ಹೆಚ್ಚಾದರೆ ನಮಗೆ ಉಸಿರಾಡಲು ಆಗದೆ ಸಾವನಪ್ಪಬಹುದು. ಇಂತಹ ಅಪಾಯಕಾರಿ ಲೋಳೆ ಅಂಶವನ್ನು ಕರಗಿಸಲು ಈ ಮನೆಮದ್ದನ್ನು ಬಳಸಿ.




ಒಂದು ಗ್ಲಾಸ್‌ ನೀರಿಗೆ 1 ರಿಂದ 2 ಚಮಚ ಉಪ್ಪು, ಚಿಟಿಕೆ ಅರಿಶಿನ ಸೇರಿಸಬೇಕು. ಈ ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಲೋಳೆ ಅಂಶವು ಕರಗಿ ನಿರಾಳವಾಗಿ ಉಸಿರಾಡಿಸಲು ಸಾಧ್ಯವಾಗುತ್ತದೆ.


ಹಾಗೇ ಬಿಸಿ ನೀರಿನಿಂದ ಆವಿ ತೆಗೆದುಕೊಳ್ಳುವುದರಿಂದ ಶ್ವಾಸಕೋಶದ ಲೋಳೆಗಳು ಕರಗುತ್ತವೆ. ಅಲ್ಲದೇ ಆಗಾಗ ಹೆಚ್ಚು ಹೆಚ್ಚು ಬಿಸಿಬಿಸಿ ನೀರು ಸೇವಿಸುವುದರಿಂದಲೂ ಶ್ವಾಸಕೋಶದಲ್ಲಿ ಉಂಟಾದ ಸೋಂಕು ನಿವಾರಣೆಯಾಗುತ್ತದೆ.


ಬೆಳ್ಳುಳ್ಳಿ, ಶುಂಠಿ, ವಿಟಮಿನ್‌ ಭರಿತ ಹಣ್ಣು, ತರಕಾರಿಗಳನ್ನು ಸೇವಿಸಿ ಹಾಗೂ. ಡೈರಿ ಉತ್ಪನ್ನಗಳು, ಸಕ್ಕರೆ, ಕರಿದ ಆಹಾರ ಪದಾರ್ಥಗಳಿಂದ ದೂರವಿರಿ.



 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ