ನಿಮ್ಮ ಮಕ್ಕಳ ಹೈಟ್ ಹೆಚ್ಚಾಗಲು ಈ ಮನೆಮದ್ದನ್ನು ಬಳಸಿ

ಮಂಗಳವಾರ, 15 ಜನವರಿ 2019 (10:01 IST)
ಬೆಂಗಳೂರು : ಹುಡುಗಿಯರು 18 ವರ್ಷದವರೆಗೆ ಹಾಗೂ ಹುಡುಗರು 24 ವರ್ಷದವರೆಗೆ ಬೆಳೆಯುತ್ತಾರೆ. ಆದರೆ ಕೆಲವು ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಅವರಿಗೆ ವಯಸ್ಸಾಗುತ್ತಿದ್ದರೂ ಅವರ  ಹೈಟ್ ಹೆಚ್ಚಾಗುವುದಿಲ್ಲ. ಅಂತವರು ಚಿಂತಿಸುವ ಅಗತ್ಯವಿಲ್ಲ. ಅದಕ್ಕಾಗಿ ಈ ಮನೆಮದ್ದನ್ನು ಬಳಸಿ ನಿಮ್ಮ ಮಕ್ಕಳ ಹೈಟ್ ಹೆಚ್ಚಿಸಿ.


250ml ಹಾಲಿಗೆ ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಮಿಕ್ಸ್ ಮಾಡಿ ದಿನಕ್ಕೆ 1 ಬಾರಿ ಕುಡಿಯಬೇಕು. ಇದರಿಂದ ಹೈಟ್ ಹೆಚ್ಚಾಗುತ್ತದೆ. ಹಾಗೇ ಪ್ರತಿದಿನ 2 ಚಮಚ ಕುಂಬಳಕಾಯಿ ಬೀಜ ತಿಂದರೆ ಇದು ಹೈಟ್ ಹೆಚ್ಚಾಗಲು ಸಹಾಯ ಮಾಡುತ್ತದೆ.
1 ಕಪ್ ಕುಂಬಳಕಾಯಿ ಬೇಯಿಸಿಕೊಂಡು ಅದಕ್ಕೆ 1ಚಮಚ ಸಕ್ಕರೆ ಅಥವಾ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ತಿನ್ನಿ. ಇದರಿಂದಲೂ ಕೂಡ  ಹೈಟ್ ಹೆಚ್ಚಾಗುತ್ತದೆ.


ಬಿಳಿಎಳ್ಳಿನ ಪುಡಿ 1 ಚಮಚ , 1 ಚಮಚ ಶುದ್ಧ ಹಸುವಿನ ತುಪ್ಪ, 1ಚಮಚ ಅಶ್ವಗಂಧ ಪುಡಿ ಇವು ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ 1ಬಾರಿ ಊಟ ಆದ ಮೇಲೆ ಮಕ್ಕಳಿಗೆ ತಿನ್ನಿಸಿದರೆ ಅವರ ಹೈಟ್ ಹೆಚ್ಚಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ