ಮಕ್ಕಳಿಗೆ ಸೊಳ್ಳೆ ಕಡಿದು ತುರಿಸುತ್ತಿದ್ದರೆ ಇದನ್ನು ಬಳಸಿ

ಸೋಮವಾರ, 6 ಆಗಸ್ಟ್ 2018 (07:05 IST)
ಬೆಂಗಳೂರು : ಗ್ರೀನ್ ಟೀ ಆರೋಗ್ಯ ವರ್ಧನೆಗೆ ಉತ್ತಮ ಔಷಧಿ ಎಂದರೆ ತಪ್ಪಾಗಲಿಕ್ಕಿಲ್ಲ. ಇದನ್ನು ಇಂದಿನ ಜನ ಹೆಚ್ಚಾಗಿ ಸೇವನೆ ಮಾಡುತ್ತಿದ್ದಾರೆ. ಪೌಡರ್ ಬಳಕೆ ಮಾಡಿ ಚಹಾ ಮಾಡುವುದಕ್ಕಿಂತ ಹೆಚ್ಚಾಗಿ ಟೀ ಬ್ಯಾಗ್ ಬಳಕೆ ಮಾಡಿ ಚಹಾ ಮಾಡುವುದು ಹೆಚ್ಚಾಗಿದೆ. ಆದರೆ ಬಳಕೆ ಮಾಡಿದ ಚಹಾ ಬ್ಯಾಗನ್ನು  ಬಿಸಾಕುವ ಬದಲು ಅದನ್ನು ಈ ರೀತಿಯಾಗಿ ಉಪಯೋಗಿಸಿದರೆ ತುಂಬಾನೇ ಲಾಭಗಳಿವೆ. 


* ಮುಖದ ಚರ್ಮದ ಮೇಲೆ ಸುಟ್ಟ ಗಾಯಗಳಾಗಿದ್ದರೆ ಬಳಕೆ ಮಾಡಿದ ಟೀ ಬ್ಯಾಗನ್ನು ಮುಖದ ಮೇಲೆ ಇಡಿ. ಇದರಿಂದ ಸುಟ್ಟ ಗಾಯ ಬೇಗ ಮರೆಯಾಗುತ್ತದೆ. 

* ಮುಖದ ಮೇಲೆ ಅಥವಾ ಕೈಗಳ ಮೇಲೆ ಊತ ಕಾಣಿಸಿಕೊಂಡರೆ ಅದರ ಮೇಲೆ ಚಹಾ ಬ್ಯಾಗ್ ಗಳನ್ನ ಇಟ್ಟರೆ ಊತ ಕಡಿಮೆಯಾಗುತ್ತದೆ. 

* ಒಂದು ವೇಳೆ ಮಕ್ಕಳಿಗೆ ಸೊಳ್ಳೆ ಕಡಿದು ಉರಿಯುತ್ತಿದ್ದರೆ ಅದರ ಮೇಲೆ ಟೀ ಬ್ಯಾಗ್ ನ್ನು ಇಟ್ಟರೆ ತುರಿಕೆ ಕಡಿಮೆಯಾಗುತ್ತದೆ. 

* ಡ್ರೈ ಸ್ಕಿನ್ ಸಮಸ್ಯೆಯುಳ್ಳವರು ಸ್ನಾನ ಮಾಡುವ ನೀರಿನಲ್ಲಿ ಚಹಾ ಬ್ಯಾಗ್ ಹಾಕಿ ಸ್ನಾನ ಮಾಡಿದರೆ ಉತ್ತಮ. ಇದರಲ್ಲಿರುವ  ಆಂಟಿಆಕ್ಸಿಡೆಂಟ್‌ಗಳಿಂದ ಚರ್ಮ ಮೃದುವಾಗುತ್ತದೆ. 

*ಬಳಕೆಯಾದ ಚಹಾ ಬ್ಯಾಗ್ ನ್ನು ನೀರಿನಲ್ಲಿ ಕುದಿಸಿ, ಆ ನೀರನ್ನು ಚರ್ಮದ ಮೇಲೆ ಹತ್ತಿಯ ಸಹಾಯದಿಂದ ಹಚ್ಚಿ. ಇದು ಚರ್ಮದಲ್ಲಿ  ತೇವಾಂಶವನ್ನು ಹೆಚ್ಚಿಸಿ ತ್ವಚೆ ಹೊಳೆಯುವಂತೆ ಮಾಡುತ್ತದೆ.

* ಕಣ್ಣಿನಲ್ಲಿ ಉರಿಯುಂಟಾದರೆ ಅವುಗಳ ಮೇಲೆ ಚಹಾ ಚೀಲವನ್ನು ಇಡಿ. ಅವು ಉಷ್ಣವನ್ನು ಹೀರಿಕೊಂಡು ಆರಾಮ ನೀಡುತ್ತವೆ. ಕಣ್ಣಿನ ಸುತ್ತಲೂ ಡಾರ್ಕ್ ಸರ್ಕಲ್ ಆಗಿದ್ದರೆ ಟೀ ಬ್ಯಾಗ್ ನ್ನು ಕಣ್ಣಿನ ಮೇಲೆ ಇಡಿ. ಇದು ರಕ್ತ ಪರಿಚಲನೆ ಹೆಚ್ಚುವಂತೆ ಮಾಡಿ ಡಾರ್ಕ್ ಸರ್ಕಲ್  ಇಲ್ಲದಂತೆ ಮಾಡುತ್ತದೆ. 

*ಇನ್ನು ಇದನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ತಲೆಗೆ ಹಾಕುವುದರಿಂದ ಕೂದಲು ಮೃದುವಾಗುತ್ತದೆ ಅಲ್ಲದೆ ಕೂದಲು ಹೊಳೆಯುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ