ಮುಖದಲ್ಲಿರುವ ಸೋಂಕುಗಳನ್ನು ಗುಣಪಡಿಸಿ ಕಾಂತಿ ಹೆಚ್ಚಿಸಲು ಈ ಪೇಸ್ ಪ್ಯಾಕ್ ಬಳಸಿ

ಭಾನುವಾರ, 16 ಜೂನ್ 2019 (08:35 IST)
ಬೆಂಗಳೂರು : ತುಳಸಿ ಗಿಡದಲ್ಲಿ ಹಲವಾರು ರೀತಿಯ ಔಷಧಿಯ ಗುಣಗಳಿವೆ. ಇವು ರೋಗಗಳನ್ನು ಗುಣಪಡಿಸಲು ಮಾತ್ರವಲ್ಲ ಅಂದವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕೂದಲಿನ ಆರೋಗ್ಯ, ಚರ್ಮದ ಆರೋಗ್ಯಕ್ಕೂ ಇದು ಉತ್ತಮ.




ಮುಖದಲ್ಲಿ ಗುಳ್ಳೆಗಳು, ಸೋಕುಗಳು ತಗಲಿದ್ದರೆ ತುಳಸಿ ಎಲೆಗಳಿಂದ ಪೇಸ್ಟ್ ತಯಾರಿಸಿ ಅದಕ್ಕೆ ½ ಕಪ್ ಮೊಸರು ಹಾಕಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತಂಪಾದ ನಿರಿಬಿಂದ ತೊಳೆದರೆ ಯಾವುದೇ ರೀತಿಯ ಸೋಕುಗಳಿದ್ದರೂ ವಾಸಿಯಾಗುತ್ತದೆ.


ಹಾಗೇ ತುಳಸಿ ರಸಕ್ಕೆ 1ಚಿಟಿಕೆ ಅರಶಿನ ಹಾಕಿ ಮುಖಕ್ಕೆ ಹಚ್ಚಿ. ಹೀಗೆ ಮಾಡುತ್ತಾ ಬಂದರೆ  ಯಾವುದೇ ಕಲೆಗಳಿದ್ದರೂ ಮಾಯವಾಗುತ್ತದೆ. ಇದು ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ, ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ಕಾಂತಿಯನ್ನು ಹೆಚ್ಚಿಸುತ್ತದೆ. ಇದು ಮುಖದಲ್ಲಿರುವ ರಂಧ್ರಗಳಲ್ಲಿರುವ ಧೂಳು,ಕೊಳೆಗಳನ್ನು ಹೊರಹಾಕುತ್ತದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ