ಎಚ್ಚರ! ಅತಿಯಾಗಿ ಹಾಲು ಸೇವಿಸಿದರೆ ಏನಾಗುತ್ತದೆ ಗೊತ್ತಾ?

ಸೋಮವಾರ, 29 ಏಪ್ರಿಲ್ 2019 (06:45 IST)
ಬೆಂಗಳೂರು : ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅತಿಯಾಗಿ ಸೇವಿಸಿದರೆ ಅಮೃತವೂ ವಿಷ ಎಂಬ ಗಾದೆಯಂತೆ, ಹಾಲನ್ನು ಅತಿಯಾಗಿ ಕುಡಿಯುವವರು ಬೇಗ ಸಾವನಪ್ಪುತ್ತಾರೆ ಎಂಬ ವಿಚಾರ ಸಂಶೋಧನೆಯೊಂದರಿಂದ ಬಹಿರಂಗಗೊಂಡಿದೆ.

ಹೌದು. ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕುಡಿದರೆ ಮೂಳೆಗಳು ದುರ್ಬಲವಾಗುತ್ತದೆಯಂತೆ. ಹೆಚ್ಚು ಹಾಲು ಕುಡಿಯುವ ಜನರು ಬಹುಬೇಗ ಸಾವನ್ನಪ್ಪುತ್ತಾರಂತೆ.

 

20 ವರ್ಷಗಳ ಕಾಲ 61 ಸಾವಿರ ಮಹಿಳೆಯರು ಹಾಗೂ 45 ಸಾವಿರ ಪುರುಷರ ಮೇಲೆ ಈ ಪ್ರಯೋಗ ಮಾಡಿದಾಗ ಡೈರಿ ಉತ್ಪನ್ನಗಳನ್ನು ಬಳಸುವ ವ್ಯಕ್ತಿಯಲ್ಲಿ ಮೂಳೆ ಸಮಸ್ಯೆ ಹೆಚ್ಚಾಗಿರುವುದು ಅಧ್ಯಯನದಿಂದ ತಿಳಿದು ಬಂದಿದೆ. ಆದ್ದರಿಂದ ದಿನದಲ್ಲಿ ಮೂರು ಬಾರಿ ಹಾಲು ಕುಡಿಯುವವರು ಬೇಗ ಸಾವನಪ್ಪುತ್ತಾರೆ.  ಹಾಗೆ ದಿನಕ್ಕೆ ಒಂದು ಬಾರಿ ಹಾಲು ಕುಡಿಯುವ ವ್ಯಕ್ತಿಗಳು ಆರೋಗ್ಯವಾಗಿರ್ತಾರೆ ಎಂದು ಅಧ್ಯಯನ ತಿಳಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ