ದೀರ್ಘಾಯುಷಿಗಳಾಗಬೇಕೇ? ಕೆಂಪು ಮೆಣಸು ತಿನ್ನಿ!

ಸೋಮವಾರ, 16 ಜನವರಿ 2017 (11:37 IST)
ಬೆಂಗಳೂರು: ಇನ್ನೂ ಹೆಚ್ಚು ದಿನ ಬದುಕಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ? ಹೀಗೆ ದೀರ್ಘಾಯುಷಿಗಳಾಗಬಯಸುವವರಿಗೆಲ್ಲಾ ಒಂದು ಶುಭ ಸುದ್ದಿ. ಆಹಾರದಲ್ಲಿ ಹೆಚ್ಚು ಕೆಂಪು ಮೆಣಸು ತಿಂದರೆ ಸಾಕು. ಆಯಸ್ಸು ವೃದ್ಧಿಯಾಗುತ್ತದಂತೆ!

ಹೀಗೊಂದು ವಿನೂತನ ಸಂಶೋಧನೆ ತಿಳಿಸಿದೆ. ಕೆಂಪು ಮೆಣಸು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೀಗಾಗಿ ಆರೋಗ್ಯವೂ ಚೆನ್ನಾಗಿರುತ್ತದೆ.  ಈ ಮೆಣಸು ಸೇರಿದ ಆಹಾರ ಸೇವಿಸುವವರ ಮರಣದ ಪ್ರಮಾಣ ಒಟ್ಟಾರೆ ಮರಣ ಪ್ರಮಾಣದ 13 ಶೇಕಡಾ ಕಡಿಮೆ ಸಾಧ್ಯತೆಯಂತೆ.

ಹಲವು ದಶಕಗಳಿಂದಲೂ ಕಾಳು ಮೆಣಸು ಮತ್ತು ಮೆಣಸು ವಿವಿಧ ರೀತಿಯಲ್ಲಿ ಆರೋಗ್ಯಕ್ಕೆ ಫಲಪ್ರದ ಎನ್ನುವುದು ಸಾಬೀತಾಗಿದೆ. ಇದೀಗ ಇದಕ್ಕೆ ಹೊಸ ಸೇರ್ಪಡೆ ಆಯಸ್ಸು ವೃದ್ಧಿ. ಈ ಸಂಶೋಧನೆಯನ್ನು ಸಂಶೋಧಕರು 13 ಸಾವಿರ ಅಮೆರಿಕನ್ನರ ಮೇಲೆ ಪ್ರಯೋಗ ಮಾಡಿದ್ದಾರಂತೆ. ಇಂತಹ ಖಾರದ ಅಡುಗೆ ಆರೋಗ್ಯಕ್ಕೂ ಒಳ್ಳೆಯದು ಎಂದು ಸಂಶೋಧಕರು ಹೇಳಿದ್ದಾರೆ. ಹಾಗಾಗಿ ಮೆಣಸು ಹಾಕಿ ಅಡುಗೆ ಮಾಡಲು ಹಿಂದೆ ಮುಂದೆ ನೋಡಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ