ಹುಟ್ಟುವ ಮಗು ಗಂಡೋ ಹೆಣ್ಣೋ? ತಿಳಿಯಲು ಇಲ್ಲಿದೆ ಸುಲಭ ಉಪಾಯ!

ಶುಕ್ರವಾರ, 13 ಜನವರಿ 2017 (15:00 IST)
ಬೆಂಗಳೂರು: ಯಾರಿಗೇ ಆದರೂ ಇದೊಂದು ಸಹಜ ಕುತೂಹಲ ಇದ್ದೇ ಇರುತ್ತದೆ. ತನಗೆ ಹುಟ್ಟುವ ಮಗು ಹೆಣ್ಣೋ, ಗಂಡೋ ಅಂತ. ಆದರೆ ವೈದ್ಯರು ಇದನ್ನು ಬಹಿರಂಗಪಡಿಸುವಂತಿಲ್ಲ. ಅದು ಕಾನೂನು ಪ್ರಕಾರ ಅಪರಾಧ. ಇನ್ನು ಹೇಗೆ ತಿಳಿಯುವುದು? ಇಲ್ಲಿದೆ ಉಪಾಯ

ಭಾರತೀಯ ವೈದ್ಯರ ನೇತೃತ್ವದ ಕೆನಡಾದ ಆಸ್ಪತ್ರೆಯ ಸಂಶೋಧಕರ ತಂಡವೊಂದು ಅಮ್ಮಂದಿರ ಕುತೂಹಲ ತಣಿಸುವಂತಹ ಸಂಶೋಧನೆ ನಡೆಸಿ ಇದಕ್ಕೆ ಉತ್ತರ ಕಂಡುಹುಡುಕುವ ಪ್ರಯತ್ನ ನಡೆಸಿದೆ. ಗರ್ಭಿಣಿಯಾಗುವ ಮೊದಲೇ ಮಹಿಳೆಯರು ಕಡಿಮೆ ರಕ್ತದೊತ್ತಡ ಹೊಂದಿದ್ದರೆ ಅವರಿಗೆ ಹೆಣ್ಣು ಮಗು ಹುಟ್ಟುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಒಂದು ವೇಳೆ ಅಧಿಕ ರಕ್ತದೊತ್ತಡವಿದ್ದರೆ, ಅವರಿಗೆ ಗಂಡು ಮಗುವಾಗುತ್ತದೆ ಎನ್ನುತ್ತಾರೆ ಸಂಶೋಧಕರು.

ಈ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ. ಗರ್ಭಿಣಿ ಮಹಿಳೆಯರ ಹಲವು ಲಕ್ಷಣಗಳಿಂದ ಆಕೆಗೆ ಹುಟ್ಟುವ ಮಗು ಹೆಣ್ಣೋ ಗಂಡೋ ಎಂದು ನಿರ್ಧರಿಸುವವರೂ ಇದ್ದಾರೆ. ಆದರೆ ಇಂತಹ ನೆಪ ಇಟ್ಟುಕೊಂಡು ಗರ್ಭಪಾತ ಮಾಡಿಸುವಂತಹ ಮೂರ್ಖತನದ ಕೆಲಸ ಯಾರೂ ಮಾಡುವುದು ಬೇಡ. ಹೆಣ್ಣಾಗಿರಲಿ, ಗಂಡಾಗಿರಲಿ, ಹುಟ್ಟುವ ಮಗು, ಹೆರುವ ಅಮ್ಮನಿಗೆ ಯಾವುದೇ ತೊಂದರೆಯಾಗದಿರಲಿ ಎಂದರೆ ಸಾಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ