ಈ ಲಕ್ಷಣಗಳು ಕಂಡುಬಂದರೆ ನಿಮಗೆ ಸಕ್ಕರೆ ಕಾಯಿಲೆ ಎಂದರ್ಥ?

ಸೋಮವಾರ, 24 ಜೂನ್ 2019 (08:12 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಬಳಲುತ್ತಿರುವ ಸಮಸ್ಯೆ ಎಂದರೆ  ಅದು ಸಕ್ಕರೆ ಕಾಯಿಲೆ. ಇದು ಒಮ್ಮೆ ಬಂದರೆ ಜೀವನ ಪರ್ಯಂತ ನಿವಾರಣೆಯಾಗುವುದಿಲ್ಲ. ನಿಮಗೆ ಸಕ್ಕರೆ ಕಾಯಿಲೆ ಇದೆಯೇ? ಇಲ್ಲವೋ? ಎಂಬುದನ್ನು ರಕ್ತ ಪರೀಕ್ಷೆಯ ಮೂಲಕ ತಿಳಿಯಬಹುದು. ಹಾಗೇ ನಿಮ್ಮಲ್ಲಿ ಕಂಡುಬರುವ ಈ ಲಕ್ಷಣಗಳಿಂದಲೂ ತಿಳಿಯಬಹುದು.



*ಪದೇ ಪದೇ ಮೂತ್ರ ಮಾಡುವುದು ಮತ್ತು ವಿಪರೀತ ಬಾಯಾರಿಕೆಯಾಗುವುದು.

 

* ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡು ವಿಪರೀತ ತೆಳ್ಳಗಾಗುವುದು

 

* ಶರೀರದಲ್ಲಿ ಸಕ್ಕರೆ ಅಂಶ ಹೆಚ್ಚು ಕಮ್ಮಿ ಆಗುವುದರಿಂದ ವಿಪರೀತ ಹಸಿವಾದ ಅನುಭವವಾಗುತ್ತದೆ.

 

*ಚರ್ಮ ಒಣಗುವುದು ಮತ್ತು ತುರಿಕೆ ಉಂಟಾಗುವುದು.

 

*ದೇಹದಲ್ಲಿ ಒಂದು ಚಿಕ್ಕ ಗಾಯವಾದರೂ ಅದು ಗುಣವಾಗದೇ ಇರುವುದು.

 

*ಏನೇ ಕೆಲಸ ಮಾಡದಿದ್ದರೂ ತುಂಬಾ ಸುಸ್ತಾಗುತ್ತದೆ

 

* ಕಣ್ಣಿನ ಭಾಗದಲ್ಲಿ ಸಕ್ಕರೆ ಅಂಶ ಸೇರಿಕೊಳ್ಳುವುದರಿಂದ ಆರಂಭದ ಹಂತದಲ್ಲಿ ಮಂದ ದೃಷ್ಟಿ ಸಮಸ್ಯೆ ಕಾಡಬಹುದು.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ