ಕಫ ಹಳದಿ ಬಣ್ಣದಲ್ಲಿ ಬರುತ್ತಿದ್ದರೆ ಏನರ್ಥ

Krishnaveni K

ಬುಧವಾರ, 10 ಏಪ್ರಿಲ್ 2024 (11:43 IST)
ಬೆಂಗಳೂರು: ಹೆಚ್ಚಿನ ಸಂದರ್ಭದಲ್ಲಿ ನಮಗೆ ಶೀತ, ಕೆಮ್ಮು ಇತ್ಯಾದಿ ಸೋಂಕುಗಳಾದಾಗ ಕಫ ಸಮಸ್ಯೆಯೂ ಜೊತೆಗೇ ಬರುತ್ತದೆ. ಆದರೆ ನಿಮಗೆ ಹಳದಿ ಕಫ ಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.

ಶೀತವಿದ್ದಾಗ ಕಫ ಬರುವುದು ಸಹಜ. ಕೆಲವರಿಗೆ ಕಫ ಬಂದರೆ ಎಷ್ಟು ಸಮಯವಾದರೂ ಅದು ನಿವಾರಣೆಯಾಗುವುದಿಲ್ಲ. ಇದರಿಂದ ಉಸಿರಾಟದ ಸಮಸ್ಯೆ, ಆಗಾಗ ಜ್ವರ ಬರುವುದು, ಸುಸ್ತಾಗುವುದು, ಕೆಮ್ಮು ಇತ್ಯಾದಿ ಸಮಸ್ಯೆಗಳು ಕಂಡುಬರಬಹುದು.

ವೈದ್ಯರ ಬಳಿ ಹೋದಾಗ ಕಫ ಉಗುಳುವಾಗ ಯಾವ ಬಣ್ಣದಲ್ಲಿರುತ್ತದೆ ಎಂದು ಕೇಳುತ್ತಾರೆ. ಯಾಕೆಂದರೆ ನಾವು ಉಗುಳುವ ಕಫ ಒಂದೊಂದು ಬಣ್ಣದಲ್ಲಿದ್ದರೂ ಅದಕ್ಕೆ ಒಂದೊಂದು ಅರ್ಥವಿದೆ. ಹಾಗಿದ್ದರೆ ಹಳದಿ ಬಣ್ಣದಲ್ಲಿ ಕಫವಿದ್ದರೆ ಅದು ಏನನ್ನು ಸೂಚಿಸುತ್ತದೆ ಎಂದು ತಿಳಿದುಕೊಳ್ಳೋಣ.

ನೀವು ಉಗುಳುವ ಕಫ ಹಳದಿ ಬಣ್ಣದಲ್ಲಿದ್ದರೆ ನಿಮಗೆ ಯಾವುದೋ ಒಂದು ಸೋಂಕು ತಗುಲಿದೆ ಎಂದೇ ಅರ್ಥ. ಹಳದಿ ಬಣ್ಣದ ಕಫವಾಗುತ್ತಿದ್ದರೆ ಅದು ನ್ಯುಮೋನಿಯಾ, ಬ್ರಾಂಕೈಟಿಸ್ ನಂತಹ ಸೋಂಕು ರೋಗಗಳ ಲಕ್ಷಣವಾಗಿರಬಹುದು. ಹೀಗಾಗಿ ಈ ರೀತಿ ಆಗುತ್ತಿದ್ದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ