ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ನಮ್ಮ ಆಹಾರ ಶೈಲಿಗಳಿಂದಾಗಿ ಯೂರಿಕ್ ಆಸಿಡ್ ದೇಹದಲ್ಲಿ ಹೆಚ್ಚಳವಾಗಿ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತವೆ.
ಕೇವಲ ಆಹಾರ ಮಾತ್ರವಲ್ಲದೆ, ಕೆಲವೊಂದು ಔಷಧಿಗಳಿಂದಲೂ ಯೂರಿಕ್ ಆಸಿಡ್ ಹೆಚ್ಚಳವಾಗುತ್ತದೆ. ಯೂರಿಕ್ ಆಸಿಡ್ ಹೆಚ್ಚಳವಾದಾಗ ದೇಹದ ಗಂಟು ಗಂಟುಗಳಲ್ಲಿ ನೋವು, ಊತ ಅಥವಾ ಕೆಂಪು ಬಣ್ಣವಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಮಧುಮೇಹಿಗಳಿಗೆ ಮೆಂತ್ಯ ಒಳ್ಳೆಯದು. ಪ್ರತಿನಿತ್ಯ ಮೆಂತ್ಯದ ನೀರು ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಅದೇ ರೀತಿ ಮೆಂತ್ಯ ಯೂರಿಕ್ ಆಸಿಡ್ ನಿಯಂತ್ರಣಕ್ಕೂ ಉತ್ತಮ. ಮೂತ್ರದಲ್ಲಿ ಕಂಡುಬರುವ ಯೂರಿಕ್ ಆಸಿಡ್ ಹೆಚ್ಚಳವಾಗದಂತೆ ಮೆಂತ್ಯ ತಡೆಯುತ್ತದೆ.
ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಾಗಿದ್ದು, ಯೂರಿಕ್ ಆಸಿಡ್ ಅಂಶ ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಜೊತೆಗೆ ಮೈ ಕೈ ನೋವು ಇತ್ಯಾದಿ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.